ಕಾಮನ್ವೆಲ್ತ್ ಗೇಮ್ಸ್ 2026| F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಭಾರತದ ಶರ್ಮಿಳಾ ಧನ್ಕರ್ ಗೆ ಚಿನ್ನ
ದೇಶದ ಮೊದಲ ಚಿನ್ನದ ಪದಕ ವಿಜೇತೆ ಪ್ಯಾರಾ-ಅಥ್ಲೀಟ್ ಎಂಬ ಗೌರವ
Update: 2026-07-28 07:19 IST
ಶರ್ಮಿಳಾ ಧನ್ಕರ್ Photo: x.com/Glasgow
ಗ್ಲಾಸ್ಗೊ : ಕಾಮನ್ವೆಲ್ತ್ ಗೇಮ್ಸ್ 2026 ರ ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಭಾರತದ ಶರ್ಮಿಳಾ ಧನ್ಕರ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಮೊದಲ ಚಿನ್ನದ ಪದಕ ವಿಜೇತೆ ಪ್ಯಾರಾ-ಅಥ್ಲೀಟ್ ಎಂಬ ಗೌರವಕ್ಕೆ ಭಾಜನರಾದರು.
ಕಾಮನ್ವೆಲ್ತ್ ಗೇಮ್ಸ್ ಕೂಟದ 5ನೇ ದಿನದಂದು, ಅವರು ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ 9.81 ಮೀಟರ್ ಎಸೆತದೊಂದಿಗೆ ಚಿನ್ನ ಗೆದ್ದು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.
F57 ವಿಭಾಗವು ಕಾಲುಗಳ ವೈಕಲ್ಯ, ಅಂಗವಿಕಲತೆ ಅಥವಾ ಸ್ನಾಯುಗಳ ಬಲಹೀನತೆ ಹೊಂದಿರುವ ಕ್ರೀಡಾಪಟುಗಳಿಗಾಗಿ ಮೀಸಲಾಗಿದೆ.
ಇದೇ ವಿಭಾಗದಲ್ಲಿ ಭಾರತದ ಶಿಲ್ಪಾ ಕೆ. ಶೈಲಾ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.