ಕಾಮನ್‌ವೆಲ್ತ್ ಗೇಮ್ಸ್ | ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ಅರ್ಹತೆ ಪಡೆದ ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್

Update: 2026-07-27 20:37 IST

ಮುರಳಿ ಶ್ರೀಶಂಕರ್ | Photo Credit : X

 

ಗ್ಲಾಸ್ಗೊ, ಜು.27: ಭಾರತದ ಮುರಳಿ ಶ್ರೀಶಂಕರ್ ಹಾಗೂ ಲೋಕೇಶ್ ಸತ್ಯನಾಥನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸೋಮವಾರ ನಡೆದ ಪುರುಷರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಶ್ರೀಶಂಕರ್ ಫೈನಲ್‌ಗೆ ಅರ್ಹತೆ ಪಡೆಯಲು 8 ಮೀ.ಎತ್ತರಕ್ಕೆ ಜಿಗಿಯಬೇಕಿತ್ತು. ಶಂಕರ್ ತನ್ನ ಮೊದಲ ಪ್ರಯತ್ನದಲ್ಲಿ 8.01 ಮೀ. ಎತ್ತರಕ್ಕೆ ಜಿಗಿದು ಫೈನಲ್ ಸುತ್ತಿಗೆ ಅರ್ಹತೆ ಪಡೆದರು.

2022ರಲ್ಲಿ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದ 27ರ ವಯಸ್ಸಿನ ಶ್ರೀಶಂಕರ್ ಜುಲೈ 29ರಂದು ಬುಧವಾರ ನಡೆಯಲಿರುವ ಫೈನಲ್‌ನಲ್ಲಿ ಮೊದಲ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ.

ಶ್ರೀಶಂಕರ್ ಪುರುಷರ ಅರ್ಹತಾ ಸುತ್ತಿನಲ್ಲಿ ‘ಎ’ ಗುಂಪಿನಿಂದ ಅರ್ಹತೆ ಪಡೆದ ಮೊದಲ ಅತ್ಲೀಟ್ ಆಗಿದ್ದಾರೆ. ಜಮೈಕಾದ ಜೋರ್ಡನ್ ಟರ್ನರ್(7.80)ಅವರನ್ನು ಹಿಂದಿಕ್ಕಿದ ಶ್ರೀಶಂಕರ್ ಗ್ರೂಪ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಕೇರಳದ ಜಂಪರ್ ಒಂದು ವೇಳೆ ಅರ್ಹತಾ ಮಾರ್ಕ್ ತಲುಪದೇ ಇದ್ದಿದ್ದರೆ, ಎರಡು ಗುಂಪುಗಳ ಅರ್ಹತಾ ಸುತ್ತಿನ ಅಂತ್ಯಕ್ಕೆ ಅಗ್ರ-12ರಲ್ಲಿ ಸ್ಥಾನ ಪಡೆಯವ ಅಗತ್ಯವಿತ್ತು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಶ್ರೀಶಂಕರ್ 8.05 ಮೀ. ಎತ್ತರಕ್ಕೆ ಜಿಗಿದು ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಪಡೆದಿದ್ದರು. ಆದರೆ ಫೈನಲ್‌ನಲ್ಲಿ 8.08 ಎತ್ತರಕ್ಕೆ ಜಿಗಿದು ಎರಡನೇ ಸ್ಥಾನ ಪಡೆದಿದ್ದರು.

ಲೋಕೇಶ್ ಸತ್ಯನಾಥನ್ ಫೈನಲ್‌ಗೆ ಅರ್ಹತೆ

ಇದೇ ಮೊದಲ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡಿರುವ ಸತ್ಯನಾಥನ್ 7.77 ಮೀಟರ್ ಎತ್ತರಕ್ಕೆ ಜಿಗಿದು ಏಳನೇ ಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟರು.

ಸತ್ಯನಾಥನ್ 8 ಮೀ.ಮಾರ್ಕ್ ಕ್ರಮಿಸದೇ ಇದ್ದರೂ ಅಗ್ರ-12ರಲ್ಲಿ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸುವಲ್ಲಿ ಶಕ್ತರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News