×
Ad

ವಿಶ್ವಕಪ್ ಕ್ವಾಲಿಫೈಯರ್ |ಕ್ರಿಸ್ಟಿಯಾನೊ ರೊನಾಲ್ಡೊ ಸಾರ್ವಕಾಲಿಕ ಅಗ್ರ ಸ್ಕೋರರ್

Update: 2025-10-15 20:52 IST

ಕ್ರಿಸ್ಟಿಯಾನೊ ರೊನಾಲ್ಡೊ | Photo Credit : PTI

ಹೊಸದಿಲ್ಲಿ,ಅ.15: ಪೋರ್ಚುಗಲ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಫಿಫಾ ವರ್ಲ್ಡ್‌ಕಪ್ ಕ್ವಾಲಿಫೈಯಿಂಗ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದಾರೆ. 2026ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಹಂಗೇರಿ ತಂಡದ ವಿರುದ್ಧ ಅವಳಿ ಗೋಲು ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

40ರ ಹರೆಯದ ಫಾರ್ವರ್ಡ್ ಆಟಗಾರ ರೊನಾಲ್ಡೊ 40ನೇ ಹಾಗೂ 41ನೇ ಅರ್ಹತಾ ಗೋಲು ಗಳಿಸಿದರು. ಈ ಮೂಲಕ 1998 ಹಾಗೂ 2016ರ ನಡುವೆ 39 ಗೋಲುಗಳನ್ನು ಗಳಿಸಿದ್ದ ಗ್ವಾಟೆಮಾಲಾ ತಂಡದ ಆಟಗಾರ ಕಾರ್ಲೊಸ್ ರುಯಿಝ್ ಅವರ ದಾಖಲೆಯನ್ನು ಮುರಿದಿದ್ದಾರೆ.

ರೊನಾಲ್ಡೊ ಅವರು 22ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು ಸಮಬಲಗೊಳಿಸುವಲ್ಲಿ ನೆರವಾದರು. ಮೊದಲಾರ್ಧಕ್ಕಿಂತ ಮುನ್ನ ಮತ್ತೊಂದು ಗೋಲು ಗಳಿಸಿದ ರೊನಾಲ್ಡೊ ಆತಿಥೇಯ ತಂಡಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು.

ವಿಶ್ವಕಪ್ ಅರ್ಹತಾ ಪಂದ್ಯದ ಇತಿಹಾಸದಲ್ಲಿ ಅಗ್ರ ಮೂವರು ಗೋಲ್‌ಸ್ಕೋರರ್‌ಗಳ ಪಟ್ಟಿ

ಕ್ರಿಸ್ಟಿಯಾನೊ ರೊನಾಲ್ಡೊ-ಪೋರ್ಚುಗಲ್-41 ಗೋಲು

ಕಾರ್ಲೊಸ್ ರುಯಿಝ್-ಗ್ವಾಟೆಮಾಲಾ-39 ಗೋಲು

ಲಿಯೊನೆಲ್ ಮೆಸ್ಸಿ-ಅರ್ಜೆಂಟೀನ-36 ಗೋಲು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News