×
Ad

ಇನ್‌ಸ್ಟಾಗ್ರಾಮ್‌ನಲ್ಲಿ 60 ಕೋಟಿ ಫಾಲೋವರ್ಸ್‌ ಪಡೆದ ಕ್ರಿಸ್ಟಿಯಾನೋ ರೊನಾಲ್ಡೊ

Update: 2023-08-11 13:08 IST

Twitter/@Cristiano

ಹೊಸದಿಲ್ಲಿ: ಇನ್‌ಸ್ಟಾಗ್ರಾಮ್‌ನಲ್ಲಿ 60 ಕೋಟಿ ಫಾಲೋವರ್ಸ್‌ ಹೊಂದಿದ ಮೊದಲ ವ್ಯಕ್ತಿಯಾಗಿ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಹೊರಹೊಮ್ಮಿದ್ದಾರೆ. ಸತತ ಮೂರನೇ ವರ್ಷ ಇನ್‌ಸ್ಟಾಗ್ರಾಮ್‌ನ ಅಗ್ರ ಗಳಿಕೆದಾರನೆಂದೂ ಅವರು ಗುರುತಿಸಲ್ಪಟ್ಟಿದ್ದಾರೆ. ಪೋರ್ಚುಗಲ್‌ ಮೂಲದ 38 ವರ್ಷದ ರೊನಾಲ್ಡೋ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 30 ಕೋಟಿ ಫಾಲೋವರ್ಸ್‌ ಹೊಂದಿದ್ದ ಮೊದಲ ವ್ಯಕ್ತಿಯಾಗಿ ಈ ಹಿಂದೆ ಹೊರಹೊಮ್ಮಿದ್ದರು.

ಅವರು ಸೌದಿ ಅರೇಬಿಯಾಗೆ ತೆರಳಿದ ನಂತರ ಜಗತ್ತಿನ ಗರಿಷ್ಠ ಸಂಭಾವನೆ ಪಡೆಯುವ ಅಥ್ಲೀಟ್‌ ಎಂದು ಈ ವರ್ಷದ ಜುಲೈ ತಿಂಗಳಿನಲ್ಲಿ ಫೋರ್ಬ್ಸ್‌ನಿಂದ ಗುರುತಿಸಲ್ಪಟ್ಟಿದ್ದರು. ಈಗ ಇನ್‌ಸ್ಟಾಗ್ರಾಮ್‌ ಶ್ರೀಮಂತರ ಪಟ್ಟಿ 2023ರಲ್ಲೂ ಅವರು ಸ್ಥಾನ ಪಡೆದಿದ್ದಾರೆ.

ಇನ್‌ಸ್ಟಾಗ್ರಾಮ್‌ ಶೆಡ್ಯೂಲಿಂಗ್‌ ಪರಿಕರ ಹಾಪರ್‌ ಎಚ್‌ಕ್ಯೂ ಸಂಯೋಜಿಸಿದ ಪಟ್ಟಿಯು ಆಂತರಿಕ ಮತ್ತು ಸಾರ್ವಜನಿಕವಾಗಿ ಲಭ್ಯ ಡೇಟಾ ಆಧಾರಿತವಾಗಿದೆ.

ಕ್ರಿಸ್ಟಿಯಾನೋ ಅವರ ಪ್ರತಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಆದಾಯ 3.23 ಮಿಲಿಯನ್‌ ಡಾಲರ್‌ ಆಗಿದೆ.

ಈ ನಿಟ್ಟಿನಲ್ಲಿ ಅವರ ಎದುರಾಳಿ ಆರ್ಜೆಂಟಿನಾದ ಲಿಯೊನೆಲ್‌ ಮೆಸ್ಸಿ ಆಗಿದ್ದು ಅವರು ಪ್ರತಿ ಪೋಸ್ಟ್‌ಗೆ 2.6 ಮಿಲಿಯನ್‌ ಡಾಲರ್‌ ಆದಾಯ ಗಳಿಸುತ್ತಾರೆ. ಈ ನಿಟ್ಟಿನಲ್ಲಿ ಗಾಯಕಿ ನಟಿ ಸೆಲೆನಾ ಗೋಮೆಝ್‌ ಮತ್ತಿತರರನ್ನು ಈ ಇಬ್ಬರು ಫುಟ್ಬಾಲ್‌ ತಾರೆಯರು ಹಿಂದಿಕ್ಕಿದ್ದಾರೆ,

ಉಳಿದಂತೆ ಟಾಪ್‌ 20 ಪಟ್ಟಿಯಲ್ಲಿ ಭಾರತದ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ಬ್ರೆಝಿಲ್‌ ಫುಟ್ಬಾಲ್‌ ಆಟಗಾರ ನೇಮರ್ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News