×
Ad

ಮಹಿಳೆಯರ ಪ್ರೀಮಿಯರ್ ಲೀಗ್ | ಗುಜರಾತ್ ಗೆ ಸೋಲು, ಫೈನಲ್‌ ಗೆ ಡೆಲ್ಲಿ

RCBಗೆ ಮುಖಾಮುಖಿ; ಈ ಸಲ ಕಪ್ ಯಾರದ್ದು?

Update: 2026-02-03 23:06 IST

Photo : @wplt20

ವಡೋದರ, ಫೆ. 3: ಗುಜರಾತ್ ಜೈಂಟ್ಸ್ ತಂಡವನ್ನು 7 ವಿಕೆಟ್‌ ಗಳ ಅಂತರದಿಂದ ಮಣಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯುಪಿಎಲ್) ಫೈನಲ್‌ ಗೆ ಲಗ್ಗೆ ಇಟ್ಟಿದೆ.

ಫೆ. 5ರಂದು ವಡೋದರದಲ್ಲೇ ನಡೆಯಲಿರುವ ಫೈನಲ್ ಪಂದ್ಯದಲ್ಲಿ RCB ತಂಡದ ಸವಾಲನ್ನು ಎದುರಿಸಲಿದೆ.ಮಂಗಳವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲಲು 169 ರನ್‌ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ವಿಕೆಟ್‌ ಗಳನ್ನು ಕಳೆದುಕೊಂಡು ಗುರಿ ತಲುಪಿತು.

ಇನಿಂಗ್ಸ್ ಆರಂಭಿಸಿದ ಲಿಝೆಲ್ ಲೀ (43 ರನ್, 34 ಎಸೆತ) ಹಾಗೂ ಶೆಫಾಲಿ ವರ್ಮಾ (31 ರನ್, 21 ಎಸೆತ) 7.1 ಓವರ್‌ ಗಳಲ್ಲಿ 89 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.

ಲೀ ಹಾಗೂ ವರ್ಮಾ ಮೂರು ರನ್ ಅಂತರದಲ್ಲಿ ಔಟಾದಾಗ ಜೊತೆಯಾದ ನಾಯಕಿ ಜೆಮಿಮಾ ರೋಡ್ರಿಗ್ಸ್ (41 ರನ್, 23 ಎಸೆತ) ಹಾಗೂ ಲೌರಾ ವೊಲ್ವಾರ್ಟ್ (ಔಟಾಗದೆ 32, 24 ಎಸೆತ) ಇನ್ನೂ 26 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ ತಂಡವು ಆರಂಭಿಕ ಆಟಗಾರ್ತಿ ಬೆತ್ ಮೂನಿ (ಔಟಾಗದೆ 62 ರನ್, 51 ಎಸೆತ, 6 ಬೌಂಡರಿ) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ ಗಳಲ್ಲಿ 7 ವಿಕೆಟ್‌ ಗಳ ನಷ್ಟಕ್ಕೆ 168 ರನ್ ಗಳಿಸಿತು.

ಡೆಲ್ಲಿ ಪರ ಚಿನೆಲ್ಲೆ ಹೆನ್ರಿ (3–35) ಹಾಗೂ ನಂದಿನಿ ಶರ್ಮಾ (2–44) ಐದು ವಿಕೆಟ್‌ ಗಳನ್ನು ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News