ರಾಷ್ಟ್ರೀಯ ಗೇಮ್ಸ್: ನೂತನ ದಾಖಲೆಯೊಂದಿಗೆ ಚಿನ್ನ ಗೆದ್ದ ದೇವ್ ಮೀನಾ
Update: 2025-02-10 21:29 IST
ದೇವ್ ಕುಮಾರ್ ಮೀನಾ | PC : X
ಡೆಹ್ರಾಡೂನ್: ಕೇವಲ 3 ವರ್ಷಗಳ ಹಿಂದೆ 400 ಮೀ.ಓಟದಿಂದ ಪೋಲ್ ವಾಲ್ಟ್‌ನತ್ತ ಒಲವು ಬೆಳೆಸಿಕೊಂಡಿದ್ದ ಮಧ್ಯಪ್ರದೇಶದ ಕ್ರೀಡಾಪಟು ದೇವ್ ಕುಮಾರ್ ಮೀನಾ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.
ಸೋಮವಾರ ಗಂಗಾ ಸ್ಟೇಡಿಯಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 19ರ ಹರೆಯದ ದೇವ್ 5.32 ಮೀ. ಎತ್ತರಕ್ಕೆ ಹಾರಿ ತಮಿಳುನಾಡಿನ ಎಸ್.ಶಿವಾ(5.31)2022ರಲ್ಲಿ ನಿರ್ಮಿಸಿದ್ದ ನ್ಯಾಶನಲ್ ರೆಕಾರ್ಡ್ ಮುರಿದು ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಂಡರು.
ಇದೇ ವೇಳೆ ಏಶ್ಯನ್ ಗೇಮ್ಸ್ ಚಾಂಪಿಯನ್ ತಜಿಂದರ್‌ಪಾಲ್ ಸಿಂಗ್ ತೂರ್ ತನ್ನ ಮೊದಲ ಪ್ರಯತ್ನದಲ್ಲಿ 19.74 ಮೀ.ದೂರ ಶಾಟ್‌ಪುಟ್ ಎಸೆದು ಚಿನ್ನದ ಪದಕ ಜಯಿಸಿದರು.