×
Ad

ಚೊಚ್ಚಲ ವಿಶ್ವಕಪ್ ನಲ್ಲೇ ಶತಕ ಬಾರಿಸಿದ ಡೆವೋನ್‌ ಕಾನ್ವೆ, ರಚಿನ್ ರವೀಂದ್ರ

Update: 2023-10-05 20:37 IST

ಅಹ್ಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ನ ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ಡೆವೋನ್‌ ಕಾನ್ವೆ (Devon Conway), ರಚಿನ್ ರವೀಂದ್ರ (Rachin Ravindra) ಮೊದಲ ವಿಶ್ವಕಪ್ ನಲ್ಲೇ ಚೊಚ್ಚಲ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ಕಾನ್ವೇ ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ 15ನೇ ಹಾಗೂ ನಾಲ್ಕನೇ ನ್ಯೂಝಿಲ್ಯಾಂಡ್ ಬ್ಯಾಟರ್ ಎನಿಸಿಕೊಂಡರು. ಅವರು ಕೇವಲ 83 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಈ ಮೈಲಿಗಲ್ಲು ತಲುಪಿದರು. ರಚಿನ್ ರವೀಂದ್ರ ಅವರು 82 ಎಸೆತಗಳಲ್ಲಿ ಶತಕ ದಾಖಲಿಸಿದರು. ಅವರು ಈ ಸಾಧನೆ ಮಾಡಿದ 16 ನೇ ಮತ್ತು ನ್ಯೂಝಿಲ್ಯಾಂಡ್‌ ಪರ 5 ನೇ ಬ್ಯಾಟರ್ ಆದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News