ರಣಜಿ| ಕರ್ನಾಟಕ ವಿರುದ್ಧ ಮಧ್ಯಪ್ರದೇಶಕ್ಕೆ ಮುನ್ನಡೆ
ಹಿಮಾಂಶು ಮಂತ್ರಿ|Photo Credit:thehindu
ಆಲೂರ್, ಜ.24: ರಣಜಿ ಟ್ರೋಫಿ ಟೂರ್ನಿಯ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಆತಿಥೇಯ ಕರ್ನಾಟಕ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.
ಮೂರನೇ ದಿನದಾಟವಾದ ಶನಿವಾರ 8 ವಿಕೆಟ್‌ಗಳ ನಷ್ಟಕ್ಕೆ 168 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡ 191 ರನ್‌ಗೆ ಆಲೌಟಾಯಿತು. ಆರಂಭಿಕ ಬ್ಯಾಟರ್ ಕೆ.ವಿ. ಅನೀಶ್ 92 ರನ್(171 ಎಸೆತ, 9 ಬೌಂಡರಿ, 1 ಸಿಕ್ಸರ್)ಶತಕ ವಂಚಿತರಾದರು. ಸಾರಾಂಶ್ ಜೈನ್ (4-42)ಯಶಸ್ವಿ ಪ್ರದರ್ಶನ ನೀಡಿದರು. ಆರ್ಯನ್ ಪಾಂಡೆ(2-35)ಹಾಗೂ ಕುಲದೀಪ್ ಸೆನ್(2-45)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಮೊದಲ ಇನಿಂಗ್ಸ್‌ನಲ್ಲಿ 132 ರನ್ ಮುನ್ನಡೆ ಪಡೆದಿರುವ ಮಧ್ಯಪ್ರದೇಶ ತಂಡ ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿದ್ದು, ಒಟ್ಟು 336 ರನ್ ಮುನ್ನಡೆಯಲ್ಲಿದೆ.
ಆರಂಭಿಕ ಬ್ಯಾಟರ್ ಹಿಮಾಂಶು ಮಂತ್ರಿ(89 ರನ್, 203 ಎಸೆತ, 4 ಬೌಂಡರಿ)ತಾಳ್ಮೆಯ ಬ್ಯಾಟಿಂಗ್‌ನಿಂದ ತಂಡದ ಮುನ್ನಡೆ ಹಿಗ್ಗಿಸಿದರು.
ಶುಭಮ್ ಶರ್ಮಾ 32 ರನ್ ಗಳಿಸಿದರು. ಕರ್ನಾಟಕದ ಪರ ವಿದ್ಯಾಧರ ಪಾಟೀಲ್(3-39)ಯಶಸ್ವಿ ಪ್ರದರ್ಶನ ನೀಡಿದರೆ, ಶಿಖರ್ ಶೆಟ್ಟಿ(2-41)ಎರಡು ವಿಕೆಟ್ ಪಡೆದರು.