×
Ad

ಇಂಗ್ಲೆಂಡ್ ಲಯನ್ಸ್ ಬ್ಯಾಟಿಂಗ್ ಸಲಹೆಗಾರನಾಗಿ ದಿನೇಶ್ ಕಾರ್ತಿಕ್

Update: 2024-01-11 23:27 IST

ದಿನೇಶ್ ಕಾರ್ತಿಕ್ |Photo: ANI 

ಲಂಡನ್: ಭಾರತದ ವಿಕೆಟ್ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಇಂಗ್ಲೆಂಡ್ ಲಯನ್ಸ್ ತಂಡ ಭಾರತಕ್ಕೆ ಭೇಟಿ ನೀಡಿದ ಸಂದರ್ಭ 9 ದಿನಗಳ ಕಾಲ ಬ್ಯಾಟಿಂಗ್ ಸಲಹೆಗಾರನಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜನವರಿ 12ರಂದು ಅಹ್ಮದಾಬಾದ್ನಲ್ಲಿ ಅಭ್ಯಾಸ ಪಂದ್ಯವನ್ನು ಆಡಿದ ನಂತರ ಜನವರಿ 17ರಂದು ಮೂರು ಚತುರ್ದಿನ ಟೆಸ್ಟ್ ಪಂದ್ಯಗಳನ್ನು ಆಡಲಿರುವ ಇಂಗ್ಲೆಂಡ್ ಲಯನ್ಸ್ ತಂಡದ ಕೋಚಿಂಗ್ ಟೀಮ್ ಅನ್ನು ಕಾರ್ತಿಕ್ ಸೇರಿಕೊಳ್ಳಲಿದ್ದಾರೆ.

ಲಯನ್ಸ್ ಬ್ಯಾಟಿಂಗ್ ಸಲಹೆಗಾರನಾಗಿರುವ ಇಯಾನ್ ಬೆಲ್ ಸದ್ಯ ಬಿಗ್ ಬ್ಯಾಶ್ ಲೀಗ್‌ ನಲ್ಲಿ ಮೆಲ್ಬರ್ನ್ ತಂಡದೊಂದಿಗೆ ಇದ್ದಾರೆ. ಹೀಗಾಗಿ ಕಾರ್ತಿಕ್ ಅಲ್ಪ ಅವಧಿಗೆ ಸಲಹೆಗಾರನಾಗಿ ಕೆಲಸ ಮಾಡಲಿದ್ದಾರೆ.

ಕಾರ್ತಿಕ್ ಅವರು ಮುಖ್ಯ ಕೋಚ್ ನೀಲ್ ಕಿಲ್ಲೀನ್, ಸಹಾಯಕ ಕೋಚ್ಗಳಾದ ರಿಚರ್ಡ್ ಡೌಸನ್ ಹಾಗೂ ಕಾರ್ಲ್ ಹೋಪ್ಕಿನ್ಸನ್, ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಜೊತೆಗೆ ಕೆಲಸ ಮಾಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News