×
Ad

ದಿವ್ಯಾ ದೇಶಮುಖ್‌ಗೆ ಅಭಿನಂದನೆಗಳ ಸುರಿಮಳೆ

Update: 2025-07-28 21:11 IST

ದಿವ್ಯಾ ದೇಶಮುಖ್ (Photo:X/@airnewsalerts)

ದಿವ್ಯಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

‘ಫಿಡೆ ಮಹಿಳಾ ಚೆಸ್ ವಿಶ್ವಕಪ್-2025ರಲ್ಲಿ ಗೆಲುವು ಸಾಧಿಸಿರುವ ದಿವ್ಯಾ ದೇಶಮುಖ್ ಅವರಿಗೆ ಅಭಿನಂದನೆಗಳು. ಅವರ ಈ ಸಾಧನೆಯು ಯುವ ಜನಾಂಗಕ್ಕೆ ಮಾದರಿಯಾಗಿದೆ. ಐತಿಹಾಸಿಕ ಫೈನಲ್ ಪಂದ್ಯದಲ್ಲಿದ್ದ ಇಬ್ಬರು ಕೂಡ ಭಾರತೀಯ ಆಟಗಾರ್ತಿಯಾಗಿದ್ದರು. ಟೂರ್ನಿಯಲ್ಲಿ ಅದ್ಭುತ ಸಾಧನೆ ತೋರಿರುವ ಕೊನೆರು ಹಂಪಿ ಅವರಿಗೆ ಕೂಡ ಅಭಿನಂದನೆಗಳು. ಇಬ್ಬರಿಗೂ ಶುಭವಾಗಲಿ’’

ನರೇಂದ್ರ ಮೋದಿ, ಪ್ರಧಾನಮಂತ್ರಿ

‘‘ಕೇವಲ 19ನೇ ವಯಸ್ಸಿನಲ್ಲಿ ಮಹಿಳಾ ಚೆಸ್ ವಿಶ್ವಕಪ್‌ನ ಚಾಂಪಿಯನ್ ಆಗಿರುವ ದಿವ್ಯಾ ದೇಶಮುಖ್ ಅವರಿಗೆ ಅಭಿನಂದನೆಗಳು. ಈ ಸಾಧನೆ ಮಾಡಿರುವ ಮೊದಲ ಭಾರತೀಯ ಮಹಿಳೆ ಅವರಾಗಿದ್ದಾರೆ. ಫೈನಲ್ ಪ್ರವೇಶಿಸಿದ ಇಬ್ಬರೂ ಭಾರತೀಯರಾಗಿದ್ದು, ಕೊನೆರು ಹಂಪಿ ಅವರಿಗೆ ಕೂಡ ಅಭಿನಂದನೆಗಳು. ಇದು ಭಾರತೀಯರ ಪ್ರತಿಭೆಗೆ ಸಾಕ್ಷಿಯಾಗಿದೆ. ಇವರಿಬ್ಬರು ಇನ್ನೂ ಸಾಧನೆ ಮಾಡುವ ಮೂಲಕ ಯುವ ಜನತೆಗೆ ಸ್ಫೂರ್ತಿ ತುಂಬಲಿ’’

ದ್ರೌಪದಿ ಮುರ್ಮು, ರಾಷ್ಟ್ರಪತಿ.

‘‘ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನಂತಹ ಪ್ರಮುಖ ಕ್ರೀಡಾಕೂಟದಲ್ಲಿ ಇಬ್ಬರು ಭಾರತೀಯರು ಮಹಿಳೆಯರು ಭಾರತವನ್ನು ಫೈನಲ್‌ನಲ್ಲಿ ಪ್ರತಿನಿಧಿಸಿದ್ದು ಹೆಮ್ಮೆಯ ವಿಚಾರ. ಕೇವಲ 19ನೇ ವಯಸ್ಸಿಗೆ ಚಾಂಪಿಯನ್ ಆದ ದಿವ್ಯಾ ದೇಶಮುಖ್ ಅವರ ಸಾಧನೆ ದೊಡ್ಡದು. ಕೊನೆರು ಹಂಪಿ ಅವರು ಕೂಡ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಘಟನೆಗೆ ಕಾರಣರಾದರು. ಇಬ್ಬರಿಗೂ ಅಭಿನಂದನೆಗಳು’’

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

‘‘ಈ ದಿನವು ಭಾರತೀಯ ಚೆಸ್ ಇತಿಹಾಸದ ಪ್ರಮುಖ ದಿನವಾಗಿದೆ. ಫಿಡೆ ಮಹಿಳಾ ಚೆಸ್ ವಿಶ್ವಕಪ್-2025 ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿರುವ ದಿವ್ಯಾ ದೇಶಮುಖ್ ಅವರಿಗೆ ಅಭಿನಂದನೆಗಳು. ಫೈನಲ್‌ನಲ್ಲಿದ್ದ ಇನ್ನೋರ್ವ ಭಾರತೀಯ ಅನುಭವಿ ಆಟಗಾರ್ತಿ ಕೊನೆರು ಹಂಪಿ ಅವರಿಗೂ ಅಭಿನಂದನೆಗಳು’’

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News