×
Ad

ಕೊನೆರು ಹಂಪಿಯನ್ನು ಸೋಲಿಸಿ ಮಹಿಳಾ ಚೆಸ್ ವಿಶ್ವಕಪ್ ಗೆದ್ದ ದಿವ್ಯಾ ದೇಶಮುಖ್

Update: 2025-07-28 17:40 IST

ದಿವ್ಯಾ ದೇಶಮುಖ್ (Photo:X/@airnewsalerts)

ಹೊಸದಿಲ್ಲಿ: 19 ವರ್ಷದ ಭಾರತೀಯ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರು 2025ರ FIDE ಮಹಿಳಾ ಚೆಸ್ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಜಾರ್ಜಿಯಾದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ನಂ.1 ಮತ್ತು ಲೆಜೆಂಡರಿ ಆಟಗಾರ್ತಿ ಕೊನೆರು ಹಂಪಿ ಅವರನ್ನು ಸೋಲಿಸುವ ಮೂಲಕ ದಿವ್ಯಾ ದೇಶಮುಖ್ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳಾ ಚೆಸ್ ತಾರೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ದಿವ್ಯಾ ದೇಶಮುಖ್ ಈ ಪ್ರಶಸ್ತಿ ಗೆಲುವಿನೊಂದಿಗೆ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಾರ್ಜಿಯಾದ ಬಟುಮಿಯಲ್ಲಿಕಳೆದ ಮೂರು ವಾರಗಳಿಂದ ಮಹಿಳಾ ಚೆಸ್ ವಿಶ್ವಕಪ್ ನಡೆಯುತ್ತಿತ್ತು.ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಕೂಡ ಫೈನಲ್ ಪ್ರವೇಶಿಸಿದ್ದರು. ಫೈನಲ್ ಪ್ರವೇಶಿಸಿದವರು ಇಬ್ಬರೂ ಭಾರತೀಯರಾಗಿರುವುದರಿಂದ ಪ್ರಶಸ್ತಿ ಭಾರತದ ಪಾಲಾಗುವುದು ಖಚಿತವಾಗಿತ್ತು. ಅದರಂತೆ ನಡೆದ ಫೈನಲ್ ಪಂದ್ಯದಲ್ಲಿ ಕೊನೆರು ಹಂಪಿ ಅವರನ್ನು ಸೋಲಿಸಿ ದಿವ್ಯಾ ದೇಶಮುಖ್ ಚೆಸ್ ವಿಶ್ವಕಪ್ ಗೆದ್ದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News