×
Ad

ಭಾರತ ಮೂಲದ ನಿಶೇಶ್ ಬಸವರೆಡ್ಡಿ ವಿರುದ್ಧ ಜೊಕೊವಿಕ್ ಜಯಭೇರಿ

Update: 2025-01-13 21:19 IST

ಮೆಲ್ಬರ್ನ್ : ಅಮೆರಿಕದ ಯುವ ಆಟಗಾರ ನಿಶೇಶ್ ಬಸವರೆಡ್ಡಿ ವಿರುದ್ಧ್ದ ಸರ್ಬಿಯದ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯಭೇರಿ ಬಾರಿಸಿದರು.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 4-6, 6-3, 6-4, 6-2 ಅಂತರದಿಂದ ಜಯ ಸಾಧಿಸಿದ ಜೊಕೊವಿಕ್ 11ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವತ್ತ ಮೊದಲ ಹೆಜ್ಜೆ ಇರಿಸಿದರು.

ಜೊಕೊವಿಕ್ 2006ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪೌಲ್ ಗೋಲ್ಡ್‌ಸ್ಟೈನ್ ವಿರುದ್ಧ ಸೋತಿದ್ದರು. ಕೆಲವೇ ತಿಂಗಳ ನಂತರ ಬಸವರೆಡ್ಡಿ ಅವರು ಕ್ಯಾಲಿಫೋರ್ನಿಯಾದಲ್ಲಿ ಭಾರತದ ದಂಪತಿಗೆ ಜನಿಸಿದ್ದರು. ಇದೀಗ ಗೋಲ್ಡ್‌ಸ್ಟೈನ್ ಅವರು ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಬಸವರೆಡ್ಡಿ ಅವರ ಕೋಚ್ ಆಗಿದ್ದಾರೆ.

ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪಂದ್ಯ ಆಡಿದ 19ರ ಹರೆಯದ ಬಸವರೆಡ್ಡಿ ಮೊದಲ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡು ಗಮನ ಸೆಳೆದರು. ಆದರೆ ಆ ನಂತರ ಮೂರು ಸೆಟ್‌ಗಳನ್ನು ನೇರ ಅಂತರದಿಂದ ಸೋತರು.

ಜೊಕೊವಿಕ್ 2ನೇ ಸುತ್ತಿನಲ್ಲಿ ಪೋರ್ಚುಗೀಸ್‌ನ 21ರ ಹರೆಯದ ಆಟಗಾರ ಜೈಮ್ ಫರಿಯಾರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News