×
Ad

ಸಿರಾಜ್‌ ಗೆ ಕಾರು ಗಿಫ್ಟ್‌ ನೀಡುವಂತೆ ಹೇಳಿದ ಅಭಿಮಾನಿಗೆ ಉದ್ಯಮಿ ಆನಂದ್‌ ಮಹೀಂದ್ರಾ ಪ್ರತಿಕ್ರಿಯಿಸಿದ್ದು ಹೀಗೆ…

Update: 2023-09-18 14:20 IST

ಹೊಸದಿಲ್ಲಿ: ಶ್ರೀಲಂಕಾ ವಿರುದ್ಧದ ಏಷ್ಯಾಕಪ್ 2023 ರ ಫೈನಲ್‌ನಲ್ಲಿ ಮುಹಮ್ಮದ್ ಸಿರಾಜ್ ನೀಡಿದ ಅದ್ಭುತ ಪ್ರದರ್ಶನಕ್ಕೆ ಕ್ರಿಕೆಟ್‌ ಪ್ರೇಮಿಗಳು ಮನಸೋತಿದ್ದು, ಉದ್ಯಮಿ ಆನಂದ್‌ ಮಹೀಂದ್ರಾ ಕೂಡಾ ಮುಹಮ್ಮದ್‌ ಸಿರಾಜ್‌ರನ್ನು ಅಭಿನಂದಿಸಿದ್ದಾರೆ.

ಕೊನೆಯ 90 ನಿಮಿಷಗಳಲ್ಲಿ ಸಿರಾಜ್ 6 ವಿಕೆಟ್‌ಗಳನ್ನು ಗಳಿಸುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದು, ಅದರಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳು ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸಿರಾಜ್ ಅವರ ಬೌಲಿಂಗ್‌ ಅನ್ನು ಕೊಂಡಾಡಿದ ಉದ್ಯಮಿ ಆನಂದ್ ಮಹೀಂದ್ರ ಅವರು ಟ್ವೀಟ್‌ ಮಾಡಿ, ನಮ್ಮ ಎದುರಾಳಿಗಾಗಿ ನಾನು ಮರುಗುತ್ತೇನೆ ಎಂದು ಭಾವಿಸಿರಲಿಲ್ಲ, ಇವತ್ತು ನಾವು ಅವರ ಮೇಲೆ ಅಲೌಕಿಕ ಶಕ್ತಿಯನ್ನು ಪ್ರಯೋಗಿಸಿದಂತೆ ಭಾಸವಾಗುತ್ತಿದೆ. (@mdsirajofficial) ಸಿರಾಜ್‌ ನೀವು ನಿಜಕ್ಕೂ ಮಾರ್ವೆಲ್ ಅವೇಂಜರ್‌ ಎಂದು ಕೊಂಡಾಡಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆ ಮಾಡಿದ ಹಲವು ಕ್ರೀಡಾಪಟುಗಳಿಗೆ ಸೇರಿದಂತೆ, ವಿಶೇಷ ಸಾಧನೆ ಮಾಡಿದವರಿಗೆ ತಮ್ಮ ಮಹೀಂದ್ರಾ ಕಾರುಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸುತ್ತಾ ಬಂದಿರುವ ಆನಂದ್‌ ಮಹೀಂದ್ರ ಬಳಿಯಲ್ಲಿ ಹಲವಾರು ಅಭಿಮಾನಿಗಳು, ಸಿರಾಜ್‌ಗೆ ಮಹೀಂದ್ರ ಕಾರು ಉಡುಗೊರೆ ನೀಡುವಂತೆ ಕೇಳಿಕೊಂಡಿದ್ದಾರೆ.

ಹೀಗೆ, ಒಬ್ಬರು ಅಭಿಮಾನಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಆನಂದ್‌ ಮಹೀಂದ್ರಾ ಅವರು, ಈಗಾಗಲೇ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

2021 ರಲ್ಲಿ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ನೀಡಿದ್ದ ಉತ್ತಮ ಪ್ರದರ್ಶನಕ್ಕಾಗಿ ಆನಂದ್‌ ಮಹೀಂದ್ರಾ ಅವರು ಟಿ ನಟರಾಜನ್, ಮಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಶುಬ್‌ಮನ್ ಗಿಲ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್‌ಗೆ ಥಾರ್‌ ಉಡುಗೊರೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News