×
Ad

ಫಿಡೆ ವರ್ಲ್ಡ್‌ಕಪ್: ದಿವ್ಯಾ ದೇಶಮುಖ್‌ಗೆ ವೈಲ್ಡ್‌ಕಾರ್ಡ್

Update: 2025-09-22 21:54 IST

 ದಿವ್ಯಾ ದೇಶಮುಖ್‌ | PC : PTI

ಹೊಸದಿಲ್ಲಿ, ಸೆ.22: ಫಿಡೆ ಮಹಿಳೆಯರ ವಿಶ್ವಕಪ್ ವಿಜೇತೆ ಗ್ರ್ಯಾಂಡ್ ಮಾಸ್ಟರ್ ದಿವ್ಯಾ ದೇಶಮುಖ್ ಗೋವಾದಲ್ಲಿ ನಡೆಯಲಿರುವ 2025ರ ಆವೃತ್ತಿಯ ಫಿಡೆ ವಿಶ್ವಕಪ್‌ಗೆ ವೈಲ್ಡ್‌ಕಾರ್ಡ್ ಪಡೆದಿದ್ದಾರೆ.

11ನೇ ಆವೃತ್ತಿಯ ಸಿಂಗಲ್-ಎಲಿಮಿನೇಶನ್ ಚೆಸ್ ಟೂರ್ನಮೆಂಟ್ ಈ ವರ್ಷದ ಅಕ್ಟೋಬರ್ 31ರಿಂದ ನವೆಂಬರ್ 27ರ ತನಕ ನಡೆಯಲಿದೆ.

ಓರ್ವ ಸ್ಪರ್ಧಿ ಕೊನೆಯ ಕ್ಷಣ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಭಾರತೀಯ ಗ್ರ್ಯಾಂಡ್ ಮಾಸ್ಟರ್ ದಿವ್ಯಾಗೆ ವೈಲ್ಡ್‌ಕಾರ್ಡ್ ನೀಡಲಾಗಿದೆ.

ನಾಗ್ಪುರದ ಚೆಸ್ ತಾರೆ ದಿವ್ಯಾ ಇತ್ತೀಚೆಗೆ ಫಿಡೆ ಗ್ರ್ಯಾಂಡ್ ಸ್ವಿಸ್‌ನ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದು, 11 ಪಂದ್ಯಗಳ ಪೈಕಿ 2ರಲ್ಲಿ ಜಯ ಹಾಗೂ 6ರಲ್ಲಿ ಡ್ರಾ ಸಾಧಿಸಿದ್ದರು.

ವಿಶ್ವ ಚಾಂಪಿಯನ್ ಡಿ. ಗುಕೇಶ್ ನೇತೃತ್ವದಲ್ಲಿ ನಾಕೌಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಇತರ 20 ಭಾರತೀಯರ ಪೈಕಿ 19ರ ಹರೆಯದ ದಿವ್ಯಾ ಕೂಡ ಸೇರಿದ್ದಾರೆ.

ಫಿಡೆ ವಿಶ್ವಕಪ್ ಪ್ರತೀ 2 ವರ್ಷಗಳಿಗೊಮ್ಮೆ ನಡೆಯಲಿದ್ದು, 3 ವಾರಗಳ ಕಾಲ ನಡೆಯಲಿದೆ. ವಿಶ್ವದ ಅಗ್ರಮಾನ್ಯ 206 ಚೆಸ್ ಪಟುಗಳು ನಾಕೌಟ್ ಮಾದರಿಯಲ್ಲಿ ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News