ಫಿಫಾ ಕ್ಲಬ್ ವಿಶ್ವಕಪ್: ರಿಯಲ್ ಮ್ಯಾಡ್ರಿಡ್ ಗೆ ಹೀನಾಯ ಸೋಲು; ಪಿಎಸ್‌ಜಿ ಫೈನಲ್‌ಗೆ
Update: 2025-07-10 08:48 IST
PC: x.com/France24_fr
ಕ್ಲಬ್ ವಿಶ್ವಕಪ್ ಪಂದ್ಯಾವಳಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿದ ಪ್ಯಾರೀಸ್ ಸೈಂಟ್-ಜರ್ಮೈನ್ (ಪಿಎಸ್‌ಜಿ ತಂಡ) ಫೈನಲ್ ತಲುಪಿದೆ. ಪ್ರಶಸ್ತಿ ಸುತ್ತಿನ ಅಂತಿಮ ಹಣಾಹಣಿಯಲ್ಲಿ ಪಿಎಸ್‌ಜಿ, ಚೆಲ್ಸಿಯಾ ವಿರುದ್ಧ ಸೆಣೆಸಲಿದೆ.
ಪೂರ್ವಾರ್ಧದಲ್ಲಿ ಫ್ಯಾಬಿಯನ್ ರುಯಿಝ್ ಅವಳಿ ಗೋಲುಗಳನ್ನು ಗಳಿಸಿದರೆ, ಉಸ್ಮಾನ್ ದೆಂಬೆಲೆ ಮತ್ತು ಗೊನ್ಸಾಲೊ ರಮೋಸ್ ಅವರು ತಲಾ ಒಂದು ಗಳಿಸಿ ಅದ್ಭುತ ಗೆಲುವಿಗೆ ಕಾರಣರಾದರು. ಭಾನುವಾರ ನಡೆಯುವ ಫೈನಲ್ ನಲ್ಲಿ ಪಿಎಸ್‌ಜಿ ತಂಡ ಚೆಲ್ಸಿಯಾ ವಿರುದ್ಧ ಆಡಲಿದೆ.
ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ಟೂರ್ನಿಯುದ್ದಕ್ಕೂ ಚೆಲ್ಸಿಯಾ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಆದರೆ ರಿಯಲ್ ಮ್ಯಾಡ್ರಿಡ್ ವಿರುದ್ಧದ ಪಂದ್ಯದಲ್ಲಿ ಪಿಎಸ್‌ಜಿ ಪ್ರದರ್ಶಿಸಿದ ಪ್ರಾಬಲ್ಯ ಮತ್ತು ಒಟ್ಟಾರೆ ಗುಣಮಟ್ಟದಿಂದಾಗಿ ಪಿಎಸ್‌ಜಿ ಫೇವರಿಟ್ ಎನಿಸಿದೆ.