×
Ad

ಫಿಫಾ ರ‍್ಯಾಂಕಿಂಗ್: 142ನೇ ಸ್ಥಾನಕ್ಕೆ ಕುಸಿದ ಭಾರತ

Update: 2025-11-20 21:57 IST

Photo Credit : X

ಹೊಸದಿಲ್ಲಿ, ನ.20: ಫಿಫಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆರು ಸ್ಥಾನಗಳ ಹಿನ್ನಡೆ ಅನುಭವಿಸಿರುವ ಭಾರತೀಯ ಫುಟ್ಬಾಲ್ ತಂಡವು 142ನೇ ಸ್ಥಾನಕ್ಕೆ ಕುಸಿದಿದೆ.

2016ರ ಅಕ್ಟೋಬರ್ ಬಳಿಕ ಭಾರತದ ಕೆಟ್ಟ ಸಾಧನೆ ಇದಾಗಿದೆ. ಅಂದು 148ನೇ ಸ್ಥಾನ ಪಡೆದಿತ್ತು. ಅಲ್ಲದೆ 2023ರ ಡಿಸೆಂಬರ್‌ ನಲ್ಲಿ 102ನೇ ಸ್ಥಾನದಲ್ಲಿದ್ದ ಭಾರತ ತಂಡವು ಆ ನಂತರ 40 ಸ್ಥಾನಗಳ ಕುಸಿತ ಕಂಡಿದೆ.

1996ರಲ್ಲಿ 94ನೇ ಸ್ಥಾನ ಪಡೆದಿರುವುದು ಭಾರತದ ಈ ತನಕದ ಶ್ರೇಷ್ಠ ಸಾಧನೆಯಾಗಿದೆ.

ಏಶ್ಯ ರಾಷ್ಟ್ರಗಳ ಪೈಕಿ ಭಾರತ 27ನೇ ಸ್ಥಾನದಲ್ಲಿದೆ. ಏಶ್ಯ ಕಪ್ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 0-1 ಗೋಲು ಅಂತರದ ಸೋಲು ಭಾರತದ ಹೀನಾಯ ಸಾಧನೆಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News