FIFA ವಿಶ್ವಕಪ್ | ಪೋರ್ಚುಗಲ್ ತಂಡ ಪ್ರಕಟ; ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವ
ಕ್ರಿಸ್ಟಿಯಾನೊ ರೊನಾಲ್ಡೊ | Photo Credit : PTI
ಮ್ಯಾಡ್ರಿಡ್, ಮೇ 19: ಪೋರ್ಚುಗಲ್ ಫುಟ್ಬಾಲ್ ತಂಡವು ಮುಂಬರುವ 2026ರ ವಿಶ್ವಕಪ್ ಗಾಗಿ ತನ್ನ ತಂಡವನ್ನು ಪ್ರಕಟಿಸಿದೆ.
ಬ್ರುನೋ ಫೆರ್ನಾಂಡಿಸ್, ಬರ್ನಾಡೊ ಸಿಲ್ವ, ವಿಟಿನ್ಹಾ ಸೇರಿದಂತೆ ಸ್ಟಾರ್ ಆಟಗಾರರನ್ನು ಒಳಗೊಂಡ ಪೋರ್ಚುಗಲ್ ತಂಡವನ್ನು ಕ್ರಿಸ್ಟಿಯಾನೊ ರೊನಾಲ್ಡೊ ನಾಯಕನಾಗಿ ಮುನ್ನಡೆಸಲಿದ್ದಾರೆ.
41ರ ವಯಸ್ಸಿನ ರೊನಾಲ್ಡೊ ದಾಖಲೆಯ ಆರನೇ ಬಾರಿ ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಕ್ಸಿಕೊದ ಗೋಲ್ಕೀಪರ್ ಗಿಲ್ಲೆರ್ಮೊ ಒಚೋವಾ ಹಾಗೂ ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್ ಮೆಸ್ಸಿ ಈ ಪಟ್ಟಿಗೆ ಸೇರಲಿದ್ದಾರೆ.
2016ರ ಯುರೋ ಕಪ್ ವಿಜೇತ ಪೋರ್ಚುಗಲ್ ತಂಡವು ಡಿಆರ್ ಕಾಂಗೊ, ಕೊಲಂಬಿಯಾ ಹಾಗೂ ಉಜ್ಬೇಕಿಸ್ತಾನ ತಂಡಗಳ ಜೊತೆ ‘ಕೆ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ವಿಶ್ವಕಪ್ ಪಂದ್ಯಾವಳಿಗಿಂತ ಮೊದಲು ಪೋರ್ಚುಗಲ್ ತಂಡವು ಚಿಲಿ ಹಾಗೂ ನೈಜೀರಿಯಾ ವಿರುದ್ಧ ಸೌಹಾರ್ದ ಪಂದ್ಯಗಳನ್ನು ಆಡಲಿದೆ.
ಜೂನ್ 17ರಂದು ಡಿಆರ್ ಕಾಂಗೊ ತಂಡವನ್ನು ಎದುರಿಸುವ ಮೂಲಕ ಪೋರ್ಚುಗಲ್ ತಂಡವು ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಪೋರ್ಚುಗಲ್ ತಂಡವು ಕ್ರಮವಾಗಿ ಜೂನ್ 23 ಹಾಗೂ 27ರಂದು ಉಜ್ಬೇಕಿಸ್ತಾನ ಹಾಗೂ ಕೊಲಂಬಿಯಾ ತಂಡಗಳನ್ನು ಎದುರಿಸಲಿದೆ.
►ಫಿಫಾ ವಿಶ್ವಕಪ್ಗೆ ಪೋರ್ಚುಗಲ್ ತಂಡ
ಗೋಲ್ ಕೀಪರ್ಗಳು: ಡಿಯೊಗೊ ಕೋಸ್ಟಾ, ಜೋಸ್ ಸಾ, ರುಯಿ ಸಿಲ್ವಾ, ರಿಕಾರ್ಡೊ ವೆಲ್ಹೋ
ಡಿಫೆಂಡರ್ ಗಳು: ಡಿಯೊಗೊ ದಲೋಟ್, ಮ್ಯಾಥ್ಯೂಸ್ ನ್ಯೂನ್ಸ್, ನೆಲ್ಸನ್ ಸೆಮೆಡೊ, ಜೊವೊ ಕ್ಯಾನ್ಸೆಲೊ, ನುನೊ ಮೆಂಡೆಸ್, ಗೊನ್ಕಾಲೊ ಇನಾಸಿಯೊ, ರೆನಾಟೊ ವೀಗಾ, ರೂಬೆನ್ ಡಯಾಸ್, ಥಾಮಸ್ ಅರಾಜುವೊ.
ಮಿಡ್ ಫೀಲ್ಡರ್ ಗಳು: ರುಬೆನ್ ನೆವೆಸ್, ಜೋವೊ ನೆವೆಸ್, ವಿಟಿನ್ಹಾ, ಬ್ರುನೋ ಫೆರ್ನಾಂಡಿಸ್, ಬರ್ನಾಡೊ ಸಿಲ್ವಾ, ಜೊವೊ ಫೆಲಿಕ್ಸ್, ಫ್ರಾನ್ಸಿಸ್ಕೊ ಟ್ರಿಂಕಾವೊ, ಫ್ರಾನ್ಸಿಸ್ಕೊ ಕಾನ್ಸಿಕಾವೊ, ಸಮು ಕೋಸ್ಟಾ.
ಫಾರ್ವರ್ಡ್ ಗಳು: ಪೆಡ್ರೊ ನೆಟೊ, ರಾಫೆಲ್ ಲಿಯೊ, ಗೊಂಕಾಲೊ ಗುಡೆಸ್, ಗೊಂಕಾಲೊ ರಾಮೋಸ್, ಕ್ರಿಸ್ಟಿಯಾನೊ ರೊನಾಲ್ಡೊ.