×
Ad

IPL 2026 | ಪರಾಗ್ ಔಟ್, ರಾಜಸ್ಥಾನಕ್ಕೆ ಜೈಸ್ವಾಲ್ ನಾಯಕ

Update: 2026-05-19 22:12 IST

ಜೈಸ್ವಾಲ್ | Photo Credit : PTI 

ಲಕ್ನೋ, ಮೇ 19: ರಾಜಸ್ಥಾನ ರಾಯಲ್ಸ್ ತಂಡದ ಹಂಗಾಮಿ ನಾಯಕ ಯಶಸ್ವಿ ಜೈಸ್ವಾಲ್, ಜೈಪುರದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಮಂಗಳವಾರ ಟಾಸ್ ಜಯಿಸಿ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಖಾಯಂ ನಾಯಕ ರಿಯಾನ್ ಪರಾಗ್ ಮಂಡಿರಜ್ಜು ಗಾಯದಿಂದಾಗಿ ಈ ಪಂದ್ಯದಿಂದ ವಂಚಿತರಾಗಿದ್ದಾರೆ. ಆದರೆ, ಪರಾಗ್ ಅವರು ವೈಭವ್ ಸೂರ್ಯವಂಶಿ ಅವರೊಂದಿಗೆ ಇಂಪ್ಯಾಕ್ಟ್ ಸಬ್ನಲ್ಲಿ ಸ್ಥಾನ ಪಡೆದಿದ್ದಾರೆ.

‘‘ನಾಯಕತ್ವ ನನ್ನ ಪಾಲಿಗೆ ಮಹತ್ವದ್ದಾಗಿದೆ. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಚಾರ’’ ಎಂದು ಜೈಸ್ವಾಲ್ ಟಾಸ್ ನಂತರ ಹೇಳಿದ್ದಾರೆ.

ಮೊಣಕಾಲು ಹಾಗೂ ಮಂಡಿನೋವಿನಿಂದ ಬಳಲುತ್ತಿರುವ ರವೀಂದ್ರ ಜಡೇಜ ಮತ್ತೊಂದು ಪಂದ್ಯದಿಂದ ವಂಚಿತರಾಗಿದ್ದಾರೆ. ಎಡಗೈ ಸ್ಪಿನ್ನರ್ ಜಡೇಜ ಅವರು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡವು ಮೂರು ಬದಲಾವಣೆಗಳನ್ನು ಮಾಡಿದೆ. ಸಂದೀಪ್ ಶರ್ಮಾ, ಸುಶಾಂತ್ ಮಿಶ್ರಾ ಹಾಗೂ ಪ್ರಿಟೋರಿಯಸ್ ತಂಡದಲ್ಲಿದ್ದಾರೆ. ಪರಾಗ್ ಅಲ್ಲದೆ, ರವಿ ಸಿಂಗ್ ಹಾಗೂ ಆಡಮ್ ಮಿಲ್ನೆ ಆಡುವ ಬಳಗದಿಂದ ವಂಚಿತರಾಗಿದ್ದಾರೆ.

ರಾಜಸ್ಥಾನ ತಂಡವು 2025ರ ಐಪಿಎಲ್ ಟೂರ್ನಿಯ ನಂತರ ಜೈಪುರದಲ್ಲಿ ಆಡಿರುವ ಎಂಟು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಐದು ಕಡೆಗಳಿಂದ ಸ್ಪರ್ಧೆ ಎದುರಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News