×
Ad

ಫಿಫಾ ವಿಶ್ವಕಪ್ ತಂಡಗಳಲ್ಲಿ ಭಾರತೀಯ ಮೂಲದ ಇಬ್ಬರು ಆಟಗಾರರಿಗೆ ಸ್ಥಾನ

ಇದು ನಮ್ಮ ಫುಟ್ಬಾಲ್ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣ: ಶಶಿ ತರೂರ್

Update: 2026-06-02 22:16 IST

ತಹ್ಸಿನ್ ಮುಹಮ್ಮದ್ ಜಮ್ಶಿದ್ | Photo : PTI , X

ಹೊಸದಿಲ್ಲಿ, ಜೂ.2: ಮುಂಬರುವ 2026ರ ಫಿಫಾ ವಿಶ್ವಕಪ್ ತಂಡಗಳಲ್ಲಿ ಭಾರತೀಯ ಮೂಲದ ಇಬ್ಬರು ಆಟಗಾರರ ಉಪಸ್ಥಿತಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಇದು ಭಾರತೀಯ ಫುಟ್ಬಾಲ್ ಬೆಂಬಲಿಗರಿಗೆ ಪ್ರಮುಖ ಮೈಲಿಗಲ್ಲು ಎಂದು ಕರೆದಿದ್ದಾರೆ.

‘‘ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಇದೊಂದು ಐತಿಹಾಸಿಕ ಕ್ಷಣ. 2026ರ ಫಿಫಾ ವಿಶ್ವಕಪ್ ಸಮೀಪಿಸುತ್ತಿದ್ದಂತೆ, ಜಾಗತಿಕ ವೇದಿಕೆ ಅಲಂಕರಿಸಲು ಭಾರತೀಯ ಪರಂಪರೆಯ ಇಬ್ಬರು ಆಟಗಾರರು ಸಜ್ಜಾಗಿದ್ದಾರೆ’’ ಎಂದು ತರೂರ್ ಎಕ್ಸ್‌ನಲ್ಲಿ ಬರೆದಿದ್ದಾರೆ.

19ರ ವಯಸ್ಸಿನ ತಹ್ಸಿನ್ ಮುಹಮ್ಮದ್ ಜಮ್ಶಿದ್ ಖತರ್‌ನ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಭಾರತೀಯ ಮೂಲದ ಮೊದಲ ಆಟಗಾರನಾಗಿದ್ದಾರೆ. ಜಮ್ಶಿದ್ ಅವರ ಕುಟುಂಬವು ಕೇರಳದ ಕಣ್ಣೂರಿನಲ್ಲಿದೆ.

ಜಮ್ಶಿದ್‌ರಲ್ಲದೆ ತಮಿಳುನಾಡು ಮೂಲದ ಆಸ್ಟ್ರೇಲಿಯದ ವಿಂಗರ್ ನಿಶಾನ್ ವೇಲುಪಿಳ್ಳೆ ಅವರನ್ನು ಕೂಡ ತರೂರ್ ತಮ್ಮ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News