×
Ad

ಕೊಹ್ಲಿಯ ವೇಗದ IPL ಅರ್ಧಶತಕ, ಪಾಟಿದಾರ್ ಅಪರೂಪದ ನಾಯಕತ್ವದ ಸಾಧನೆ

Update: 2026-06-01 21:52 IST

ವಿರಾಟ್ ಕೊಹ್ಲಿ | Photo Credit : PTI

ಬೆಂಗಳೂರು, ಜೂ. 1: 2025ರ ಜೂನ್ 2ರವರೆಗೆ RCB ಒಂದೂ IPL ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಇದೀಗ ಸತತ ಎರಡು IPL ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. 2026ರ IPLನಲ್ಲಿ RCBಯ ಯಶೋಗಾಥೆಯತ್ತ ಒಂದು ನೋಟ:

3: RCB ತಂಡವು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೂರನೇ ತಂಡವಾಗಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (2011) ಹಾಗೂ ಮುಂಬೈ ಇಂಡಿಯನ್ಸ್ (2020) ತಂಡಗಳನ್ನು ಸೇರಿಕೊಂಡಿತು.

RCB ಒಂದಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ನಾಲ್ಕನೇ ತಂಡವಾಗಿದೆ. ಮುಂಬೈ ಹಾಗೂ ಸಿಎಸ್ಕೆ ತಲಾ ಐದು ಬಾರಿ, ಕೋಲ್ಕತಾ ನೈಟ್ ರೈಡರ್ಸ್ ಮೂರು ಬಾರಿ IPL ಪ್ರಶಸ್ತಿ ಗೆದ್ದಿವೆ.

1: ತನ್ನ ಮೊದಲ ಎರಡು ಋತುಗಳಲ್ಲೇ ಪ್ರಶಸ್ತಿ ಗೆದ್ದ ಮೊದಲ ನಾಯಕ ರಜತ್ ಪಾಟಿದಾರ್. ಸತತ ಪ್ರಶಸ್ತಿಗಳನ್ನು ಗೆದ್ದ ಮೂರನೇ ನಾಯಕ ಪಾಟಿದಾರ್. ಎಂ.ಎಸ್. ಧೋನಿ (2010, 2011) ಹಾಗೂ ರೋಹಿತ್ ಶರ್ಮಾ (2019, 2020) ಈ ಸಾಧನೆ ಮಾಡಿದ್ದರು.

25: ವಿರಾಟ್ ಕೊಹ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ನಲ್ಲಿ ತನ್ನ ಅರ್ಧಶತಕ ಪೂರೈಸಲು 25 ಎಸೆತಗಳನ್ನು ಎದುರಿಸಿದರು. IPLನಲ್ಲಿ ಇದು ಅವರ ವೇಗದ ಅರ್ಧಶತಕವಾಗಿದೆ. ಈ ಹಿಂದೆ 2018ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ 26 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಕೊಹ್ಲಿ IPL ಫೈನಲ್ನಲ್ಲಿ ನಾಲ್ಕನೇ ಜಂಟಿ ವೇಗದ ಅರ್ಧಶತಕ ಗಳಿಸಿದ ಬ್ಯಾಟರ್ ಆಗಿದ್ದಾರೆ.

22: IPL ಟೂರ್ನಿಯಲ್ಲಿ ಕೊಹ್ಲಿ 22ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತೀಯರ ಪೈಕಿ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ. ರೋಹಿತ್ ಶರ್ಮಾ ಅವರ 21 ಪ್ರಶಸ್ತಿಗಳ ದಾಖಲೆಯನ್ನು ಮುರಿದಿದ್ದಾರೆ. ಎಬಿ ಡಿ ವಿಲಿಯರ್ಸ್ (25) ಮಾತ್ರ ಕೊಹ್ಲಿಗಿಂತ ಮುಂದಿದ್ದಾರೆ. ಕ್ರಿಸ್ ಗೇಲ್ ಕೂಡ 22 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ.

88: ಈ ವರ್ಷದ IPLನಲ್ಲಿ ಕಾಗಿಸೊ ರಬಾಡ ವಿರುದ್ಧ ಕೊಹ್ಲಿ 88 ರನ್ ಗಳಿಸಿದ್ದರು. IPLನ ಒಂದೇ ಋತುವಿನಲ್ಲಿ ಒಬ್ಬ ಬೌಲರ್ ವಿರುದ್ಧ ಬ್ಯಾಟರ್ ಒಬ್ಬನ ಶ್ರೇಷ್ಠ ಸಾಧನೆ ಇದಾಗಿದೆ. 2026ರಲ್ಲಿ ಜೋಫ್ರಾ ಆರ್ಚರ್ ವಿರುದ್ಧ ಇಶಾನ್ ಕಿಶನ್ 74 ರನ್ ಗಳಿಸಿದ್ದರು.

5-0: ಕೃನಾಲ್ ಪಾಂಡ್ಯ ಅವರು ಆಟಗಾರನಾಗಿ IPL ಫೈನಲ್ನಲ್ಲಿ 5-0 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಕೇವಲ ರೋಹಿತ್ ಶರ್ಮಾ ಹಾಗೂ ಅಂಬಟಿ ರಾಯುಡು ಮಾತ್ರ ತಲಾ ಆರು ಬಾರಿ ಫೈನಲ್ ಗೆದ್ದಿದ್ದಾರೆ.

ಜೋಶ್ ಹೇಝಲ್ವುಡ್ ಕೂಡ ತಾನಾಡಿರುವ ಎಲ್ಲ ಮೂರು IPL ಫೈನಲ್ ಹಾಗೂ ಎಲ್ಲ ಆರು ಟಿ20 ಫೈನಲ್ ಪಂದ್ಯಗಳನ್ನು ಗೆದ್ದಿದ್ದಾರೆ.

16: RCB ಪ್ರಸಕ್ತ IPL ಟೂರ್ನಿಯುದ್ದಕ್ಕೂ 16 ಆಟಗಾರರನ್ನು ಬಳಸಿಕೊಂಡಿದೆ. IPL ಋತುವಿನಲ್ಲಿ ಕೇವಲ ಮೂರು ತಂಡಗಳು ಮಾತ್ರ ಇದಕ್ಕಿಂತ ಕಡಿಮೆ ಆಟಗಾರರನ್ನು ಆಡಿಸಿವೆ. 2015ರಲ್ಲಿ ಸಿಎಸ್ಕೆ (14), 2018 ಹಾಗೂ 2020ರಲ್ಲಿ ಮುಂಬೈ (15) ಕಡಿಮೆ ಆಟಗಾರರನ್ನು ಬಳಸಿಕೊಂಡಿದ್ದವು. 2023ರಲ್ಲಿ ಇಂಪ್ಯಾಕ್ಟ್ ಆಟಗಾರ ನಿಯಮ ಜಾರಿಗೆ ಬಂದ ಬಳಿಕ ಒಂದೇ ಋತುವಿನಲ್ಲಿ ಕನಿಷ್ಠ 18 ಆಟಗಾರರನ್ನು ಬಳಸಿಕೊಳ್ಳಲಾಗಿದೆ.

28: ಈ ವರ್ಷದ IPLನಲ್ಲಿ ಭುವನೇಶ್ವರ ಕುಮಾರ್ ಒಟ್ಟು 28 ವಿಕೆಟ್ ಗಳನ್ನು ಪಡೆದಿದ್ದಾರೆ. ಮುಹಮ್ಮದ್ ಶಮಿ (2023, 28 ವಿಕೆಟ್) ದಾಖಲೆಯನ್ನು ಸರಿಗಟ್ಟಿದ್ದಾರೆ. ಭುವನೇಶ್ವರರನ್ನು ಹಿಂದಿಕ್ಕಿದ ರಬಾಡ 29 ವಿಕೆಟ್ ಗಳೊಂದಿಗೆ ಎರಡನೇ ಬಾರಿ ಪರ್ಪಲ್ ಕ್ಯಾಪ್ ಗೆದ್ದರು.

2: ವಿರಾಟ್ ಕೊಹ್ಲಿ (37 ವರ್ಷ, 207 ದಿನ) IPL ಫೈನಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಎರಡನೇ ಹಿರಿಯ ಆಟಗಾರನಾಗಿದ್ದಾರೆ. ಅನಿಲ್ ಕುಂಬ್ಳೆ (38 ವರ್ಷ, 219 ದಿನ) 2009ರಲ್ಲಿ ಫೈನಲ್ ಆಡಿದ ಹಿರಿಯ ಕ್ರಿಕೆಟಿಗರಾಗಿದ್ದಾರೆ.

3-27: ರಾಸಿಕ್ ಸಲಾಮ್ IPL ಫೈನಲ್ನಲ್ಲಿ ಎರಡನೇ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಹೊಸ ಆಟಗಾರನಾಗಿದ್ದಾರೆ. 2014ರಲ್ಲಿ ಕೆಕೆಆರ್ ವಿರುದ್ಧ ಕರಣ್ವೀರ್ ಸಿಂಗ್ 54 ರನ್ಗೆ ನಾಲ್ಕು ವಿಕೆಟ್ ಗಳನ್ನು ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News