ಐದನೇ ಟಿ-20: ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಅರ್ಷದೀಪ್ ಸಿಂಗ್ ಗೆ 5 ವಿಕೆಟ್ ಗೊಂಚಲು; 4-1 ಅಂತರದಿಂದ ಸರಣಿ ಗೆದ್ದ ಭಾರತ
Photo Credit : PTI
ತಿರುವನಂತಪುರ: ಇಶಾನ್ ಕಿಶನ್ ಶತಕ(103 ರನ್, 43 ಎಸೆತ, 6 ಬೌಂಡರಿ, 10 ಸಿಕ್ಸರ್)ಹಾಗೂ ಸೂರ್ಯಕುಮಾರ ಯಾದವ್(63 ರನ್, 30 ಎಸೆತ, 4 ಬೌಂಡರಿ, 6 ಸಿಕ್ಸರ್)ಭರ್ಜರಿ ಬ್ಯಾಟಿಂಗ್, ಅರ್ಷದೀಪ ಸಿಂಗ್(5-51) ಐದು ವಿಕೆಟ್ ಗೊಂಚಲುಗಳ ನೆರವಿನಿಂದ ಭಾರತ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ-20 ಪಂದ್ಯವನ್ನು 46 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಈ ಮೂಲಕ ಭಾರತವು ಐದು ಪಂದ್ಯಗಳ ಟಿ-20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.
ಶನಿವಾರ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್ ಗಳಿಸುವಲ್ಲಿ ಶಕ್ತವಾಯಿತು.
ಗೆಲ್ಲಲು 272 ರನ್ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ಆರಂಭಿಕ ಆಟಗಾರ ಫಿನ್ ಅಲ್ಲೆನ್(80 ರನ್, 38 ಎಸೆತ,8 ಬೌಂಡರಿ, 6 ಸಿಕ್ಸರ್)ಅರ್ಧಶತಕದ ಹೊರತಾಗಿಯೂ 19.4 ಓವರ್‌ಗಳಲ್ಲಿ 225 ರನ್ ಗಳಿಸಿ ಆಲೌಟಾಯಿತು.
ಅರ್ಷದೀಪ ಯಶಸ್ವಿ ಬೌಲರ್ ಎನಿಸಿಕೊಂಡರೆ, ಆಲ್‌ರೌಂಡರ್ ಅಕ್ಷರ್ ಪಟೇಲ್(3-33)ಮೂರು ವಿಕೆಟ್ ಪಡೆದರು.