ರಣಜಿ: ಕರ್ನಾಟಕದ ವಿರುದ್ಧ ಪಂಜಾಬ್‌ಗೆ 112 ರನ್ ಮುನ್ನಡೆ
Photo Credit : PTI
ಮೊಹಾಲಿ: ನಾಯಕ ಉದಯ್ ಸಹರಾನ್ ಅರ್ಧಶತಕದ (ಔಟಾಗದೆ 63, 110 ಎಸೆತ, 4 ಬೌಂಡರಿ, 2 ಸಿಕ್ಸರ್)ನೆರವಿನಿಂದ ಪಂಜಾಬ್ ತಂಡ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ವಿರುದ್ಧ 112 ರನ್ ಮುನ್ನಡೆಯಲ್ಲಿದೆ.
ಮೂರನೇ ದಿನವಾದ ಶನಿವಾರ ದಿನದಾಟದಂತ್ಯಕ್ಕೆ ಪಂಜಾಬ್ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳ 119 ರನ್ ಗಳಿಸಿದೆ. ಉದಯ್ ಹಾಗೂ ಅನ್ಮೋಲ್‌ಪ್ರೀತ್ ಸಿಂಗ್(6 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಅಭಿಜೀತ್ ಗರ್ಗ್ 33 ರನ್ ಗಳಿಸಿ ಔಟಾಗಿದ್ದಾರೆ.
ಶ್ರೇಯಸ್ ಗೋಪಾಲ್(1-25), ಮುಹ್ಸಿನ್ ಖಾನ್(2-29)ಹಾಗೂ ಶಿಖರ್ ಶೆಟ್ಟಿ(1-43)ತಲಾ ಒಂದು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು 6 ವಿಕೆಟ್‌ಗಳ ನಷ್ಟಕ್ಕೆ 255 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡವು 316 ರನ್ ಗಳಿಸಿ ಆಲೌಟಾಯಿತು. ಕೇವಲ 7 ರನ್ ಮುನ್ನಡೆ ಪಡೆಯಿತು.
42 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್ ಗೋಪಾಲ್(77 ರನ್, 195 ಎಸೆತ, 6 ಬೌಂಡರಿ)ಅರ್ಧಶತಕ ಗಳಿಸಿದರು. ವಿದ್ಯಾಧರ ಪಾಟೀಲ್ 34 ರನ್ ಗಳಿಸಿ ಔಟಾದರು.
ಹರ್‌ಪ್ರೀತ್ ಬ್ರಾರ್(4-125), ಸುಖದೀಪ ಸಿಂಗ್(3-42)ಹಾಗೂ ಅನ್ಮೋಲ್‌ಜೀತ್ ಸಿಂಗ್(2-62)ಕರ್ನಾಟಕ ತಂಡವನ್ನು ಕಾಡಿದರು.