×
Ad

ಎಫ್‌ಐಎಚ್ ಪ್ರೊ ಲೀಗ್: ಭಾರತದ ಪುರುಷರ ಹಾಕಿ ತಂಡ ಪ್ರಕಟ

Update: 2025-01-30 21:11 IST

ಸಾಂದರ್ಭಿಕ ಚಿತ್ರ | PC : olympics.com

ಹೊಸದಿಲ್ಲಿ: ಒಡಿಶಾ ರಾಜಧಾನಿ ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿರುವ 2024-25ರ ಸಾಲಿನ ಎಫ್‌ಐಎಚ್ ಪ್ರೊ ಲೀಗ್‌ಗೆ ಮುಂಚಿತವಾಗಿ ಹಾಕಿ ಇಂಡಿಯಾವು ಗುರುವಾರ 32 ಸದಸ್ಯರನ್ನು ಒಳಗೊಂಡಿರುವ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ.

ಹಿರಿಯ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ತಂಡದ ನಾಯಕನಾಗಿ ಮುಂದುವರಿಯಲಿದ್ದು, ಹಾರ್ದಿಕ್ ಸಿಂಗ್ ಉಪನಾಯಕನಾಗಿದ್ದಾರೆ. ಭಾರತವು ಫೆಬ್ರವರಿ 15ರಿಂದ 25ರ ತನಕ ನಡೆಯಲಿರುವ ಪಂದ್ಯಗಳಲ್ಲಿ ಸ್ಪೇನ್, ಜರ್ಮನಿ, ಐರ್‌ಲ್ಯಾಂಡ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ. ಪ್ರತಿ ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ.

ಜೂನಿಯರ್ ತಂಡ ಹಾಗೂ ಪ್ರಸಕ್ತ ನಡೆಯುತ್ತಿರುವ ಹಾಕಿ ಇಂಡಿಯಾ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ 22ರ ಹರೆಯದ ಅಂಗದ್ ಸಿಂಗ್ ಹಾಗೂ 20ರ ವಯಸ್ಸಿನ ಅರ್ಷದೀಪ್ ಸಿಂಗ್ ಮುಂಬರುವ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಿಗೆ ಇದೇ ಮೊದಲ ಬಾರಿ ಸೀನಿಯರ್ ತಂಡಕ್ಕೆ ಕರೆ ಪಡೆದಿದ್ದಾರೆ.

ಭಾರತದ ಪುರುಷರ ಹಾಕಿ ತಂಡ:

ಗೋಲ್‌ಕೀಪರ್‌ಗಳು: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ, ಪ್ರಿನ್ಸ್‌ದೀಪ್ ಸಿಂಗ್.

ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್(ನಾಯಕ), ಸುಮಿತ್, ಸಂಜಯ್, ಜುಗ್ರಾಜ್ ಸಿಂಗ್, ನೀಲಂ ಸಂಜೀಪ್, ವರುಣ್ ಕುಮಾರ್, ಯಶ್‌ದೀಪ್ ಸಿವಾಚ್.

ಮಿಡ್‌ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್(ಉಪ ನಾಯಕ), ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ,ಎಂ.ರಬಿಚಂದ್ರ ಸಿಂಗ್, ರಾಜಿಂದರ್ ಸಿಂಗ್.

ಫಾರ್ವರ್ಡ್‌ಗಳು: ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಬಾಬಿ ಸಿಂಗ್ ಧಾಮಿ, ಶೀಲಾನಂದ ಲಾಕ್ರಾ, ದಿಲ್‌ಪ್ರೀತ್ ಸಿಂಗ್, ಅರೈಜೀತ್ ಸಿಂಗ್, ಉತ್ತಮ್ ಸಿಂಗ್, ಅಂಗದ್ ಸಿಂಗ್, ಅರ್ಷದೀಪ್ ಸಿಂಗ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News