×
Ad

ಎಫ್‌ಐಎಚ್ ಪ್ರೊ ಲೀಗ್ | ಭಾರತ ಮಹಿಳೆಯರ ಹಾಕಿ ತಂಡ ಪ್ರಕಟ

Update: 2025-01-29 21:04 IST

 Photo Credit: PTI

ಹೊಸದಿಲ್ಲಿ: ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ಫೆಬ್ರವರಿ 15ರಿಂದ 25ರ ತನಕ ನಡೆಯಲಿರುವ 2024-25ರ ಸಾಲಿನ ಎಫ್‌ಐಎಚ್ ಪ್ರೊ ಲೀಗ್‌ಗೆ ಹಾಕಿ ಇಂಡಿಯಾವು ಬುಧವಾರ 24 ಸದಸ್ಯರುಗಳನ್ನು ಒಳಗೊಂಡ ಭಾರತದ ಮಹಿಳೆಯರ ಹಾಕಿ ತಂಡವನ್ನು ಪ್ರಕಟಿಸಿದೆ.

ಸಲಿಮಾ ಟೇಟೆ ತಂಡದ ಸಾರಥ್ಯವಹಿಸಲಿದ್ದು, ಫಾರ್ವರ್ಡ್ ಆಟಗಾರ್ತಿ ನವನೀತ್ ಕೌರ್ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಭಾರತ ಹಾಕಿ ತಂಡವು ಫೆ.15ರಂದು ಇಂಗ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆ ನಂತರ ನೆದರ್‌ಲ್ಯಾಂಡ್ಸ್, ಸ್ಪೇನ್ ಹಾಗೂ ಜರ್ಮನಿ ತಂಡಗಳನ್ನು ಎದುರಿಸಲಿದೆ. ಪ್ರತಿ ತಂಡಗಳು ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ.

ಪ್ರಮುಖ ತಂಡದ ಜೊತೆಗೆ ಮೀಸಲು ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಗೋಲ್‌ಕೀಪರ್ ಬನ್ವಾರಿ ಸೋಲಂಕಿ, ಡಿಫೆಂಡರ್‌ ಗಳಾದ ಅಕ್ಷತಾ ಅಬಾಸೊ ಧೇಕಾಲೆ, ಜ್ಯೋತಿ ಸಿಂಗ್ ಹಾಗೂ ಫಾರ್ವರ್ಡ್‌ಗಳಾದ ಸಾಕ್ಷಿ ರಾಣಾ, ಅನ್ನು ಹಾಗೂ ಸೋನಮ್ ಅವರಿದ್ದಾರೆ.

ಭಾರತದ ಮಹಿಳಾ ಹಾಕಿ ತಂಡ:

ಗೋಲ್‌ಕೀಪರ್‌ ಗಳು: ಸವಿತಾ, ಬಿಚು ದೇವಿ ಖರಿಬಮ್

ಡಿಫೆಂಡರ್‌ ಗಳು: ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಉದಿತಾ, ಜ್ಯೋತಿ, ಇಶಿಕಾ ಚೌಧರಿ, ಜ್ಯೋತಿ ಛತ್ರಿ.

ಮಿಡ್ ಫೀಲ್ಡರ್‌ ಗಳು: ವೈಷ್ಣವಿ ವಿಠಲ್ ಫಾಲ್ಕೆ, ನೇಹಾ, ಮನಿಶಾ ಚೌಹಾಣ್, ಸಲಿಮಾ ಟೇಟೆ(ನಾಯಕಿ), ಸುನೆಲಿತಾ ಟೊಪ್ಪೊ, ಲಾಲ್‌ರೆಂಸಿಯಾಮಿ, ಬಲ್ಜೀತ್ ಕೌರ್, ಶರ್ಮಿಳಾ ದೇವಿ.

ಫಾರ್ವರ್ಡ್‌ಗಳು: ನವನೀತ್ ಕೌರ್(ಉಪ ನಾಯಕಿ), ಮುಮ್ತಾಝ್ ಖಾನ್, ಪ್ರೀತಿ ದುಬೆ, ಋತುಜಾ ದಾದಾಸೊ ಪಿಸಾಲ್, ಬ್ಯೂಟಿ ಡಂಗ್‌ಡಂಗ್, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯಾ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News