×
Ad

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌: 189 ರನ್‌ ಗೆ ಆಲೌಟಾದ ಭಾರತ

Update: 2025-11-15 15:14 IST

PC | X@ProteasMenCSA

ಕೋಲ್ಕತಾ : ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್‌ ನ ಎರಡನೇ ದಿನದಾಟದಲ್ಲಿ ಭಾರತ ತನ್ನ ಮೊದಲ ಇನಿಂಗ್ಸ್‌ ನಲ್ಲಿ ಕೇವಲ 189 ರನ್‌ ಗೆ ಆಲೌಟ್ ಆಗಿದೆ.

ಊಟದ ವಿರಾಮದ ವೇಳೆಗೆ 138\4 ವಿಕೆಟ್ ಕಳೆದುಕೊಂಡಿದ್ದ ಭಾರತ, ದ್ವಿತೀಯ ಸೆಷನ್‌ನಲ್ಲಿ ದಿಢೀರ್ ಕುಸಿತ ಅನುಭವಿಸಿತು.

ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ದಾಳಿ ನಡೆಸಿದ ಸೈಮನ್ ಹಾರ್ಮರ್ 4 ವಿಕೆಟ್‌ ಪಡೆದರೆ, ಮಾರ್ಕೋ ಜಾನ್ಸನ್ 3 ವಿಕೆಟ್‌ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News