×
Ad

ನ್ಯಾಯಾಲಯದಲ್ಲಿ ಕುಸಿದು ಬಿದ್ದ ಮಾಜಿ ಕ್ರಿಕೆಟಿಗ ಸ್ಲೇಟರ್

Update: 2024-04-16 22:34 IST

ಮೈಕಲ್ ಸ್ಲೇಟರ್ | PC : NDTV

ಮರೂಕಿಡೋರ್ (ಆಸ್ಟ್ರೇಲಿಯ), : ಹನ್ನೆರಡಕ್ಕೂ ಅಧಿಕ ಆರೋಪಗಳನ್ನು ಎದುರಿಸುತ್ತಿರುವ ಆಸ್ಟ್ರೇಲಿಯದ ಮಾಜಿ ಟೆಸ್ಟ್ ಕ್ರಿಕೆಟಿಗ ಮೈಕಲ್ ಸ್ಲೇಟರ್  ದೇಶದ ನ್ಯಾಯಾಲಯವೊಂದು ಜಾಮೀನು ನಿರಾಕರಿಸಿದಾಗ ಅವರು ಕುಸಿದು ಬಿದ್ದರು ಎಂದು ವರದಿಯಾಗಿದೆ.

ಅವರ ಜಾಮೀನು ಅರ್ಜಿಯನ್ನು ಕ್ವೀನ್ಸ್ಲ್ಯಾಂಡ್ ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದಾಗ ಕುಸಿದು ಬಿದ್ದ ಅವರನ್ನು ನ್ಯಾಯಾಲಯದ ಸಿಬ್ಬಂದಿ ಎತ್ತಿ ನಿಲ್ಲಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

54 ವರ್ಷದ ಸ್ಲೇಟರ್ ಗೃಹ ಹಿಂಸೆ ಪ್ರಕರಣಗಳು ಮತ್ತು ಕಾನೂನುಬಾಹಿರವಾಗಿ ಹಿಂಬಾಲಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರು ಕಳೆದ ಆರು ತಿಂಗಳಲ್ಲಿ ಅನಪೇಕ್ಷಿತ ಬರಹ ಸಂದೇಶಗಳು ಮತ್ತು ಬೆದರಿಕೆ ಕರೆಗಳನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News