×
Ad

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಥೋರ್ಪೆ ಆತ್ಮಹತ್ಯೆ ಮಾಡಿಕೊಂಡಿದ್ದರು : ಅಮಂಡಾ ಥೋರ್ಪೆ

Update: 2024-08-12 21:02 IST

ಗ್ರಹಾಂ ಥೋರ್ಪೆ | PC : NDTV 

ಲಂಡನ್ : ದೀರ್ಘಕಾಲದಿಂದ ಖಿನ್ನತೆಯ ವಿರುದ್ಧ ಹೋರಾಡುತ್ತಿದ್ದ ನನ್ನ ಪತಿ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಗ್ರಹಾಂ ಥೋರ್ಪೆ ಅವರ ಪತ್ನಿ ಅಮಂಡಾ ಥೋರ್ಪೆ ಬಹಿರಂಗಪಡಿಸಿದರು.

ಕಳೆದ ಎರಡು ವರ್ಷಗಳಿಂದ ಹದಗೆಟ್ಟ ದೈಹಿಕ ಆರೋಗ್ಯದಿಂದಾಗಿ 55 ವರ್ಷದ ಥೋರ್ಪೆ ಅವರ ಮಾನಸಿಕ ಆರೋಗ್ಯವೂ ಸರಿ ಇರಲಿಲ್ಲ ಎನ್ನಲಾಗಿದೆ.

ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ಅಥರ್ಟನ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಂಡಾ ಅವರು, ಆಗಸ್ಟ್ 5ರಂದು ನಿಧನರಾದ ಗ್ರಹಾಂ ಕುರಿತ ವಿವರಗಳನ್ನು ಹಂಚಿಕೊಂಡರು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಥೋರ್ಪೆ ಅವರ ಸಾವಿನ ಸುದ್ದಿಯನ್ನು ಮೊದಲಿಗೆ ಪ್ರಕಟಿಸಿತ್ತು.

ಗ್ರಹಾಂ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದೀರ್ಘಕಾಲದ ತನಕ ಮಾನಸಿಕ ಹಾಗೂ ದೈಹಿಕ ಸವಾಲುಗಳನ್ನು ಎದುರಿಸಿದ್ದರು ಎಂಬ ವಿಚಾರವನ್ನು ಅಮಂಡಾ ಬಹಿರಂಗಪಡಿಸಿದರು.

ಕಳೆದ ಎರಡು ವರ್ಷಗಳಿಂದ ಗ್ರಹಾಂ ತೀವ್ರ ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿದ್ದರು. 2022ರ ಮೇ ತಿಂಗಳಲ್ಲಿ ಜೀವ ತೆಗೆದುಕೊಳ್ಳಲು ಗಂಭೀರ ಪ್ರಯತ್ನ ಮಾಡಿದ್ದರು. ಪರಿಣಾಮವಾಗಿ ಅವರು ತೀವ್ರ ನಿಗಾ ಘಟಕದಲ್ಲಿ ದೀರ್ಘಕಾಲ ಉಳಿಯಬೇಕಾಯಿತು ಎಂದು ಅಮಂಡಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News