×
Ad

ಟಿ20 ಲೀಗ್ ಆಡಲು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಜ್ಜು

Update: 2024-07-26 10:48 IST

 ಸಮಿತ್‌ ದ್ರಾವಿಡ್‌ Photo: x.com/mysore_warriors

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಟಿ20 ಲೀಗ್ ಆಡಲು ಸಜ್ಜಾಗಿದ್ದು, ಮೈಸೂರು ವಾರಿಯರ್ಸ್ ತಂಡ ಇವರನ್ನು ಹರಾಜಿನಲ್ಲಿ ಖರೀದಿಸಿದೆ. ಪ್ರಸಕ್ತ ಋತುವಿನ ಮಹಾರಾಜ ಟ್ರೋಫಿ ಕೆಎಸ್ಟಿಎ ಟಿ20 ಆರಂಭಕ್ಕೆ ಮುನ್ನ ಈ ಮೈಸೂರು ವಾರಿಯರ್ಸ್ ಈ ಅಂಶವನ್ನು ಬಹಿರಂಗಪಡಿಸಿದೆ.

ಮಧ್ಯಮ ಕ್ರಮಾಂಕದ ಆಟಗಾರ ಮತ್ತು ವೇಗದ ಬೌಲರ್ ಸಮಿತ್ ಅವರ ಸೇವೆಯನ್ನು 50 ಸಾವಿರ ರೂಪಾಯಿಗೆ ವಾರಿಯರ್ಸ್ ಪಡೆದುಕೊಂಡಿದೆ. "ಕೆಎಸ್ಸಿಎಯ ವಿವಿಧ ವಯೋವರ್ಗದ ಟೂರ್ನಿಗಳಲ್ಲಿ ಅವರು ಅಪಾಯ ಭರವಸೆ ಮೂಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ನಮ್ಮ ತಂಡದಲ್ಲಿ ಬಳಸಿಕೊಳ್ಳುವುದು ಉತ್ತಮ ಎಂಬ ಭಾವನೆ ನಮ್ಮದು" ಎಂದು ಮೈಸೂರು ವಾರಿಯರ್ಸ್ ತಂಡದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಕೂಚ್ಬೆಹಾರಿ ಟ್ರೋಫಿ ಗೆದ್ದ 19 ವರ್ಷ ವಯೋಮಿತಿಯ ಕರ್ನಾಟಕ ತಂಡದಲ್ಲಿ ಸಮಿತ್ ಇದ್ದರು. ಅಂತೆಯೇ ಇದಕ್ಕೂ ಮುನ್ನ ಭಾರತಕ್ಕೆ ಭೇಟಿ ನೀಡಿದ್ದ ಲ್ಯಾಕ್ಶೈರ್ ತಂಡದ ವಿರುದ್ಧದ ಪಂದ್ಯದಲ್ಲಿ ಕೆಎಸ್ ಸಿಎ 11 ತಂಡವನ್ನು ಕೂಡಾ ಇವರು ಪ್ರತಿನಿಧಿಸಿದ್ದರು. ಕರುಣ್ ನಾಯರ್ ನೇತೃತ್ವದ ಮೈಸೂರು ವಾರಿಯರ್ಸ್ ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ಬಾರಿ 1 ಲಕ್ಷ ರೂಪಾಯಿಗೆ ಖರೀದಿಯಾದ ಪ್ರಸಿದ್ಧ್ ಕೃಷ್ಣಾ ಅವರ ಸೇವೆಯಿಂದಾಗಿ ಬೌಲಿಂಗ್ ವಿಭಾಗ ಕೂಡಾ ಬಲಿಷ್ಠವಾಗಲಿದೆ.

ಫ್ರಾಂಚೈಸಿಗಳು ನಾಯರ್ ಅವರನ್ನು ಉಳಿಸಿಕೊಂಡಿದ್ದು, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಸಿದ್ಧ್ ಕೃಷ್ಣ ಸದ್ಯದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆ ಎಂದು ಮೂಲಗಳು ಹೇಳಿವೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News