×
Ad

ಇಂಗ್ಲೆಂಡ್ ವಿರುದ್ಧದ ಪ್ರದರ್ಶನ ಕಾಯ್ದುಕೊಳ್ಳಬೇಕು: ಗಂಭೀರ್ ಕಿವಿಮಾತು

Update: 2025-08-05 21:24 IST

 ಗೌತಮ್ ಗಂಭೀರ್ | PC : PTI 

ಲಂಡನ್,ಆ.5: ಟೀಮ್ ಇಂಡಿಯಾವು ದ ಓವಲ್ ನಲ್ಲಿ ಸೋಮವಾರ ಕೊನೆಗೊಂಡ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 6 ರನ್ ಅಂತರದಿಂದ ಮಣಿಸಿ ಸರಣಿಯನ್ನು 2-2ರಿಂದ ಸಮಬಲಗೊಳಿಸಿ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯನ್ನು ಹಂಚಿಕೊಂಡಿದೆ.

ಶುಭಮನ್ ಗಿಲ್ ನಾಯಕತ್ವ ಹಾಗೂ ಮುಖ್ಯಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಮರು ಹೋರಾಟದಲ್ಲಿ ತಂಡ ಎಷ್ಟೊಂದು ತೊಡಗಿಸಿಕೊಂಡಿದೆ ಎನ್ನುವುದನ್ನು ಭಾರತೀಯ ಪಾಳಯದಲ್ಲಿನ ಭಾವೋದ್ವೇಗವು ಪ್ರತಿಬಿಂಬಿಸಿದೆ.

ರೋಚಕ ಗೆಲುವಿನ ನಂತರ ಗಂಭೀರ್ ಅವರು ತಂಡವನ್ನು ಉದ್ದೇಶಿಸಿ ನೀಡಿರುವ ಹೃದಯಸ್ಪರ್ಶಿ ಭಾಷಣವನ್ನು ಬಿಸಿಸಿಐ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಹಂಚಿಕೊಂಡಿದೆ.

‘‘ಸರಣಿಯನ್ನು 2-2ರಿಂದ ಸಮಬಲಗೊಳಿಸಿ ಅಮೋಘ ಫಲಿತಾಂಶ ಪಡೆದಿದ್ದೇವೆ. ಪ್ರತಿಯೊಬ್ಬರಿಗೂ ಅಭಿನಂದನೆಗಳು. ನಾವು ಇದೇ ರೀತಿ ಉತ್ತಮವಾಗಿ ಆಡುಬೇಕು. ಕಠಿಣ ಶ್ರಮವನ್ನು ಮುಂದುವರಿಸಬೇಕು. ನಾವಿದನ್ನು ಕಾಯ್ದುಕೊಂಡರೆ ದೀರ್ಘ ಸಮಯ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರಾಬಲ್ಯ ಸಾಧಿಸಬಹುದು’’ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

‘‘ಸಹಾಯಕ ಸಿಬ್ಬಂದಿ ಬರುತ್ತಾರೆ, ಹೋಗುತ್ತಾರೆ. ಆದರೆ ಡ್ರೆಸ್ಸಿಂಗ್ ರೂಮ್ ನ ಸಂಸ್ಕೃತಿ ಇದೇ ರೀತಿ ಇರಬೇಕು. ಜನರು ಈ ಸಂಸ್ಕೃತಿಯ ಭಾಗವಾಗಬೇಕು. ಅಂತಹದ್ದನ್ನು ನಾವು ಸೃಷ್ಟಿಸಬೇಕು. ನಿಮಗೆ ಲಭಿಸಿರುವ ವಿರಾಮವನ್ನು ಆನಂದಿಸಿ. ಪ್ರತೀ ಕ್ಷಣವನ್ನು ಅನುಭವಿಸುವ ಅರ್ಹತೆ ನಿಮಗಿದೆ. ನಿಮ್ಮ ಸಾಧನೆ ಶ್ಲಾಘನಾರ್ಹ’’ ಎಂದು ಗೌತಮ್ ಗಂಭೀರ್ ಒತ್ತಿ ಹೇಳಿದ್ದಾರೆ

‘‘ಈ ಸರಣಿಯು 2-2 ಅಂತರದಿಂದ ಕೊನೆಗೊಂಡಿರುವುದು ಅತ್ಯುತ್ತಮ ಫಲಿತಾಂಶವಾಗಿದೆ. ಎಲ್ಲರಿಗೂ ಅಭಿನಂದನೆಗಳು’’ ಎಂದು ಗಂಭೀರ್ ಅವರು ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News