×
Ad

ಸಮಯ ವ್ಯರ್ಥ ಮಾಡುವುದು ಕ್ರೀಡಾಸ್ಫೂರ್ತಿಯಲ್ಲ: ಇಂಗ್ಲೆಂಡ್ ತಂಡವನ್ನು ಟೀಕಿಸಿದ ಗಿಲ್

Update: 2025-07-22 21:18 IST

ಶುಭಮನ್ ಗಿಲ್ | PC : PTI 

ಮ್ಯಾಂಚೆಸ್ಟರ್: ಲಾರ್ಡ್ಸ್ ಟೆಸ್ಟ್‌ನಲ್ಲಿ ಸಮಯ ವ್ಯರ್ಥ ಮಾಡುವ ತಂತ್ರವನ್ನು ಅನುಸರಿಸಿದ ಆರೋಪ ಎದುರಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಕ್ರೀಡಾಸ್ಫೂರ್ತಿಯಾಗುವುದಿಲ್ಲ ಎಂದು ಹೇಳಿದ್ದಾರೆ.

4ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ವರದಿಗಾರರೊಂದಿಗೆ ಮಾತನಾಡಿದ ಗಿಲ್, ಲಾರ್ಡ್ಸ್ ಟೆಸ್ಟ್‌ನ 3ನೇ ದಿನ ಝ್ಯಾಕ್ ಕ್ರಾಲಿ ಒಳಗೊಂಡ ವಿವಾದಾತ್ಮಕ ಘಟನೆಯನ್ನು ಉಲ್ಲೇಖಿಸಿದರು. ಈ ಘಟನೆಯು ಮಾತಿನ ಚಕಮಕಿಗೆ ಕಾರಣವಾಗಿತ್ತು.

‘‘ನನಗೆ ಎಲ್ಲ ವಿಷಯವನ್ನು ಸ್ಪಷ್ಟಪಡಿಸಬೇಕಾಗಿದೆ. ಆ ದಿನ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಆಡಲು 7 ನಿಮಿಷ ಸಮಯವಿತ್ತು. ಆದರೆ ಅವರು ಕ್ರೀಸ್‌ಗೆ 90 ಸೆಕೆಂಡ್ ತಡವಾಗಿ ಆಗಮಿಸಿದರು. ನಿಮ್ಮ ದೇಹಕ್ಕೆ ಚೆಂಡು ತಾಗಿದರೆ ಫಿಸಿಯೋಗಳು ಆಗಮಿಸಲು ಅವಕಾಶ ನೀಡಲಾಗುತ್ತದೆ. ಆದರೆ ಕ್ರೀಸ್‌ಗೆ 90 ಸೆಕೆಂಡ್ ತಡವಾಗಿ ಬರುವುದು ಕ್ರೀಡಾಸ್ಫೂರ್ತಿಯಲ್ಲ’’ ಎಂದರು.

ಭಾರತ ತಂಡವು 3ನೇ ಟೆಸ್ಟ್‌ನಲ್ಲಿ ತನ್ನ ಮೊದಲ ಇನಿಂಗ್ಸ್‌ನಲ್ಲಿ 387 ರನ್ ಗಳಿಸಿ ಇಂಗ್ಲೆಂಡ್‌ನ ಸ್ಕೋರನ್ನು ಸರಿಗಟ್ಟಿತ್ತು. ಆಗ ದಿನದಾಟ ಮುಗಿಯುವ ಮೊದಲು ಕೇವಲ 2 ಓವರ್ ಬೌಲಿಂಗ್ ಮಾಡಲು ಅವಕಾಶವಿತ್ತು. ಕ್ರಾಲಿ ಅವರು ಸಮಯ ವ್ಯರ್ಥ ಮಾಡಿದ ಕಾರಣ ಕೇವಲ 1 ಓವರ್ ಬೌಲಿಂಗ್ ನಡೆಸಲಾಗಿತ್ತು. ಇದರಿಂದ ಭಾರತೀಯ ಆಟಗಾರರು ನಿರಾಶೆಗೊಂಡಿದ್ದರು.

ತಂಡ ಸಂಯೋಜನೆಯ ಬಗ್ಗೆ ಮಾತನಾಡಿದ ಗಿಲ್, ‘‘ಆಕಾಶ್ ದೀಪ್ ಹಾಗೂ ಅರ್ಷದೀಪ್ ಲಭ್ಯವಿಲ್ಲ. ನಮ್ಮಲ್ಲಿ 20 ವಿಕೆಟ್‌ಗಳನ್ನು ಪಡೆಯಬಲ್ಲ ಆಟಗಾರರಿದ್ದಾರೆ. ವಿಭಿನ್ನ ಆಟಗಾರರನ್ನು ಆಡಿಸುವುದು ಉತ್ತಮವಲ್ಲ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News