×
Ad

ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್‌ಗೆ ನೆಲಕಚ್ಚಿದ ಗುಜರಾತ್ ಜೈಂಟ್ಸ್

Update: 2024-03-01 22:41 IST

Photo: X/@wplt20

 ಬೆಂಗಳೂರು : ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಅಲಿಸ್ಸಾ ಹೀಲೆ, ಗ್ರೇಸ್ ಹ್ಯಾರಿಸ್ ಅವರ ಅಮೋಘ ಬ್ಯಾಟಿಂಗ್ ಹಾಗೂ ಸೋಫಿ ಎಕ್ಲೆಸ್ಟೋನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಯುಪಿ ತಂಡವು ಗುಜರಾತ್ ಜೈಂಟ್ಸ್ ವಿರುದ್ದ ಏಕಪಕ್ಷೀಯ ಗೆಲುವು ಸಾಧಿಸಿತು.

ಯುಪಿ ವಾರಿಯರ್ಸ್ ಆರಂಭಿಕ ಬ್ಯಾಟರ್ ಗಳಾಗಿ ಕ್ರೀಸ್ ಗೆ ಇಳಿದ ತಂಡದ ನಾಯಕಿ ಅಲಿಸ್ಸಾ ಹೀಲಿ 21 ಎಸೆತಗಳಲ್ಲಿ 7 ಬೌಂಡರಿ ಸಹಿತ 33 ರನ್ ಗಳಿಸಿ ಕ್ಯಾಥರಿನ್ ಎಮ್ಮಾ ಬ್ರೈಸ್ ಅವರ ಎಸೆತಕ್ಕೆ ಪೆವಿಲಿಯನ್ ಹಾದಿ ಹಿಡಿದರು. ಕಿರಣ್ ನೌಗಿರೆ 8 ಎಸೆತ ಎದುರಿಸಿ 2 ಬೌಂಡರಿಯೊಂದಿಗೆ 12 ರನ್ ಗಳಿಸಿ ತನುಜಾ ಬೌಲಿಂಗ್‌ ನಲ್ಲಿ ವಿಕಟ್‌ ಒಪ್ಪಿಸಿದರು. ಚಾಮರಿ 17 ರನ್‌ ಗಳಿಸಿದರೆ, ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ‌ ಗ್ರೇಸ್ ಹ್ಯಾರಿಸ್ 33 ಎಸೆತದಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 60 ರನ್ ಬಾರಿಸಿ ತಂಡದ ಗೆಲುವಿನ್ನಲ್ಲಿ ಪ್ರಮುಖ ಪಾತ್ರವಹಿಸಿದರು.

 ಶ್ವೇತಾ 2 ರನ್‌ ಹಾಗೂ ದೀಪ್ತಿ ಶರ್ಮಾ17 ರನ್‌ ಕೊಡುಗೆ ನೀಡಿದರು.

ಗುಜರಾತ್ ಜೈಂಟ್ಸ್ ಪರ ಬೌಲರ್ ಗಳಾದ ತನುಜಾ 2 ವಿಕೆಟ್, ಮೇಘನಾ ಸಿಂಗ್ ಹಾಗೂ ಕ್ಯಾಥರಿನ್ ತಲಾ 1 ವಿಕೆಟ್ ಪಡೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News