ಕ್ವಾರ್ಟರ್ ಫೈನಲ್‌ಗಾಗಿ ಗುಜರಾತ್, ಹಿಮಾಚಲಪ್ರದೇಶ ಹಣಾಹಣಿ
Update: 2025-01-29 21:18 IST
Photo Credit | timesofindia
ಹೊಸದಿಲ್ಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ತಂಡಗಳ ನಡುವಿನ ರಣಜಿ ಟ್ರೋಫೀಯ ಕೊನೆಯ ಲೀಗ್ ಪಂದ್ಯವು ಗುರುವಾರದಿಂದ ಅಹ್ಮದಾಬಾದ್‌ನಲ್ಲಿ ಆರಂಭವಾಗಲಿದೆ.
ಎಲೈಟ್ ಬಿ ಗುಂಪಿನಿಂದ ಕ್ವಾರ್ಟರ್ ಫೈನಲ್ ಹಂತಕ್ಕೇರಲು ಉಭಯ ತಂಡಗಳ ಮಧ್ಯೆ ತೀವ್ರ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಹಿಂದಿನ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ 221 ರನ್ ಅಂತರದಿಂದ ಜಯಶಾಲಿಯಾಗಿರುವ ವಿದರ್ಭ ತಂಡವು ಬಿ ಗುಂಪಿನಿಂದ ನಾಕೌಟ್ ಹಂತಕ್ಕೇರಿದ ಮೊದಲ ತಂಡ ಎನಿಸಿಕೊಂಡಿದೆ. ಕ್ವಾರ್ಟರ್ ಫೈನಲ್ ತಲುಪಿರುವ ವಿದರ್ಭ ತಂಡವನ್ನು ಸೇರಿಕೊಳ್ಳಲು ಗುಜರಾತ್(26 ಅಂಕ) ಹಾಗೂ ಹಿಮಾಚಲಪ್ರದೇಶ(21 ಅಂಕ) ಹೋರಾಟ ನಡೆಸಲಿವೆ.
ಇದೇ ವೇಳೆ, ಆಂಧ್ರ(7), ಉತ್ತರಾಖಂಡ(10), ರಾಜಸ್ಥಾನ(16), ಹೈದರಾಬಾದ್(16) ಹಾಗೂ ಪುದುಚೇರಿ(3)ಟೂರ್ನಿಯಿಂದ ನಿರ್ಗಮಿಸಿವೆ.