×
Ad

ಗುಜರಾತ್ ಟೈಟಾನ್ಸ್ ಗೆಲುವಿಗೆ 207 ರನ್ ಗುರಿ

Update: 2024-03-26 22:44 IST

Photo: X \ @IPL

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಶಿವಮ್ ದುಬೆಯ 23 ಎಸೆತಗಳಲ್ಲಿ 51 ರನ್ಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡದ ಗೆಲುವಿಗೆ 207 ರನ್ ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ.

ಅದು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 206 ರನ್ ಗಳನ್ನು ಗಳಿಸಿದೆ.

ಚೆನ್ನೈಯ ಎಮ್.ಎ. ಚಿದಂಬರಮ್ ಸ್ಟೇಡಿಯಮ್ನಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಬ್ಮನ್ ಗಿಲ್ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು.

ಆರಂಭಿಕ ರಚಿನ್ ರವೀಂದ್ರ ಕೇವಲ 20 ಎಸೆತಗಳಲ್ಲಿ 46 ರನ್ ಗಳನ್ನು ಸಿಡಿಸಿ ಚೆನ್ನೈಗೆ ವೈಭವದ ಆರಂಭ ಒದಗಿಸಿದರು. ಅವರು ಪವರ್ಪ್ಲೇಯ ಎಲ್ಲಾ ಪ್ರಯೋಜನವನ್ನು ಪಡೆದುಕೊಂಡರು. ಆದರೆ, ಅರ್ಧ ಶತಕದಿಂದ ವಂಚಿತರಾದರು.

ನಾಯಕ ಋತುರಾಜ್ ಗಾಯಕ್ವಾಡ್ ಕೂಡ 46 ರನ್ ಗಳನ್ನು ಗಳಿಸಿದರು. ಅವರು ಇದಕ್ಕಾಗಿ 36 ಎಸೆತಗಳನ್ನು ಬಳಸಿದರು.

ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್ ಗೆ 62 ರನ್ ಗ ಳನ್ನು ಸೇರಿಸಿ ತಂಡದ ಇನಿಂಗ್ಸ್ ಗೆ ಭದ್ರ ಬುನಾದಿ ಹಾಕಿದರು.

ಶಿವಮ್ ದುಬೆ ಮಂಗಳವಾರ ಎಂದಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಂಡರು. ಅವರ ಇನಿಂಗ್ಸ್ ನಲ್ಲಿ 5 ಸಿಕ್ಸರ್ ಗಳು ಮತ್ತು ಬೌಂಡರಿಗಳಿದ್ದವು.

ದುಬೆ ನಿರ್ಗಮನದ ಬಳಿಕ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡ ಡ್ಯಾರಿಲ್ ಮಿಚೆಲ್ 20 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಸಮೀರ್ ರಿಝ್ವಿ 6 ಎಸೆತಗಳಲ್ಲಿ 14 ರನ್ಗಳನ್ನು ಸಿಡಿಸಿ ತಂಡದ ಮೊತ್ತಕ್ಕೆ ಅತ್ಯುತ್ತಮ ದೇಣಿಗೆ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News