×
Ad

IPL 2025 | ಮುಂಬೈ ಗೆಲುವಿನ ನಾಗಾಲೋಟಕ್ಕೆ ತಡೆ; ಗುಜರಾತ್‌‌ ಗೆ ರೋಚಕ ಜಯ

Update: 2025-05-07 00:53 IST

Photo credit: X/@IPL

ಮುಂಬೈ : ವಾಂಖೆಡೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್‌‌ ಟೈಟಾನ್ಸ್ 3 ವಿಕೆಟ್‌ಗಳ ಜಯ ಸಾಧಿಸಿದೆ.

ಮುಂಬೈ ನೀಡಿದ 156 ರನ್‌ ಗುರಿ ಬೆನ್ನಟಿದ ಗುಜರಾತ್‌ ಗೆ ಮಳೆ ಅಡ್ಡಿಪಡಿಸಿತು. ನಂತರ ಪಂದ್ಯ ಪುನರಾರಂಭದ ಬಳಿಕ DLS ನಿಯಮದ ಪ್ರಕಾರ 19 ಓವರ್‌ ಗಳಲ್ಲಿ 147 ರನ್‌ ಗಳಿಸಬೇಕಾಗಿತ್ತು. ಕೊನೆಯ ಓವರ್‌ ನಲ್ಲಿ 15 ರನ್‌ ಅವಶ್ಯಕತೆ ಇದ್ದಾಗ ಜೆರಾಲ್ಡ್ ಕೋಎಡ್ಝಿ ಹಾಗೂ ರಾಹುಲ್‌ ತೆವಾಟಿಯ ಅವರ ಸಾಹಸದಿಂದ ಗುರಿ ಬೆನ್ನಟ್ಟಿದ ಗುಜರಾತ್ ರೋಚಕ ಗೆಲುವು ಸಾಧಿಸಿತು.‌

ಈ ಮೂಲಕ ಗುಜರಾತ್‌ ತಂಡ ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News