×
Ad

ಹಾಲೆ ಓಪನ್ | ಇಟಲಿಯ ಟೆನಿಸ್ ಸ್ಟಾರ್ ಸಿನ್ನೆರ್ ಚಾಂಪಿಯನ್

Update: 2024-06-24 21:07 IST

ಹ್ಯೂಬರ್ಟ್ ಹರ್ಕಾಝ್ |  PC : ANI 

ಹಾಲೆ: ಇಟಲಿಯ ಟೆನಿಸ್ ಸ್ಟಾರ್ ಜನ್ನಿಕ್ ಸಿನ್ನೆರ್ ತನ್ನ ಡಬಲ್ಸ್ ಜೊತೆಗಾರ ಹ್ಯೂಬರ್ಟ್ ಹರ್ಕಾಝ್ ರನ್ನು ಸೋಲಿಸಿ ಇದೇ ಮೊದಲ ಬಾರಿ ಗ್ರಾಸ್ಕೋರ್ಟ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ಸಿನ್ನೆರ್ ಅವರು ಹರ್ಕಾಝ್ ರನ್ನು 7-6(8), 7-6(2) ಸೆಟ್ ಗಳ ಅಂತರದಿಂದ ಮಣಿಸಿದರು.

ಈ ಗೆಲುವು ಸಿನ್ನೆರ್ ಗೆ ಮಹತ್ವದ ಮೈಲಿಗಲ್ಲಾಗಿದ್ದು ಇದು ಅವರು ಗೆದ್ದಿರುವ 14ನೇ ಸಿಂಗಲ್ಸ್ ಪ್ರಶಸ್ತಿಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪಂದ್ಯದುದ್ದಕ್ಕೂ ಉಭಯ ಆಟಗಾರರು ತಮ್ಮ ಪರಾಕ್ರಮ ಪ್ರದರ್ಶಿಸಿದ್ದು, ಬ್ರೇಕ್ ಪಾಯಿಂಟ್ಸ್ ಉಳಿಸಿಕೊಂಡರು. ಪರಿಣಾಮವಾಗಿ ಮೊದಲ ಸೆಟ್ ಟೈ-ಬ್ರೇಕರ್ನತ್ತ ಸಾಗಿತು. ಕೈ-ಬ್ರೇಕರ್ ನಲ್ಲಿ ಸಿನ್ನೆರ್ ಜಯಶಾಲಿಯಾಗಿ ಮೇಲುಗೈ ಸಾಧಿಸಿದರು.

ಎರಡನೇ ಸೆಟ್ ನಲ್ಲಿ ಸಿನ್ನೆರ್ಗೆ 2-0 ಮುನ್ನಡೆ ಪಡೆಯುವ ಅವಕಾಶವಿತ್ತು. ಆದರೆ, ಪೋಲ್ಯಾಂಡ್ನ ಹರ್ಕಾಝ್ ಅವರು ಮರಳಿ ಹೋರಾಟ ನೀಡಿ ಎರಡು ಬ್ರೇಕ್ ಪಾಯಿಂಟ್ಸ್ ಉಳಿಸಿದರು. 2ನೇ ಸೆಟ್ ಕೂಡ ಟೈ-ಬ್ರೇಕರ್ನತ್ತ ಸಾಗಿದ್ದು, ಮತ್ತೊಮ್ಮೆ ಎರಡನೇ ಟೈ-ಬ್ರೇಕರ್ ನಲ್ಲಿ ಜಯ ಸಾಧಿಸಿದ ಸಿನ್ನೆರ್ ಪ್ರಶಸ್ತಿ ಬಾಚಿಕೊಂಡರು.

ಸಿನ್ನೆರ್ ವಿಂಬಲ್ಡನ್ ಚಾಂಪಿಯನ್ ಶಿಪ್ ಗೆ ತಯಾರಿ ನಡೆಸಲಿದ್ದು, ಕಳೆದ ವರ್ಷ ಈ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದರು. ಈ ಪ್ರಮುಖ ಟೂರ್ನಮೆಂಟ್ ಜುಲೈ 1ರಿಂದ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News