×
Ad

ಹಾರ್ದಿಕ್ ಪಾಂಡ್ಯ- ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಘೋಷಣೆ

Update: 2024-07-18 22:11 IST

 ನತಾಶಾ ಸ್ಟಾಂಕೋವಿಕ್  , ಹಾರ್ದಿಕ್ ಪಾಂಡ್ಯ | PC : X

ಮುಂಬೈ : ರೂಪದರ್ಶಿ ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಡುವುದಾಗಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗುರುವಾರ ಪೋಸ್ಟ್‌ ಮಾಡುವ ಮೂಲಕ ಘೋಷಿಸಿದ್ದಾರೆ.

ವಿಚ್ಛೇದನದ ಕುರಿತು ಜಂಟೀ ಹೇಳಿಕೆಯನ್ನು ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯಾ ಬಿಡುಗಡೆ ಮಾಡಿದ್ದು, ಮುಂದೆ ಅವರಿಬ್ಬರೂ ಜೊತೆಯಾಗಿ ಇರುವುದಿಲ್ಲ ಎಂದು ದೃಢಪಡಿಸಿದ್ದಾರೆ.

ಈ ಕಠಿಣ ನಿರ್ಧಾರದ ಬಳಿಕ ಅವರಿಬ್ಬರೂ ತಮ್ಮ 3 ವರ್ಷದ ಮಗ ಅಗಸ್ತ್ಯನ ಸಹ-ಪೋಷಕರಾಗಿ ಮುಂದುವರೆಯುತ್ತಾರೆ ಎಂದು ಜಂಟೀ ಹೇಳಿಕೆಯನ್ನು ಉಲ್ಲೇಖಿಸಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ, "4 ವರ್ಷಗಳ ಕಾಲ ಜೊತೆಯಾಗಿದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಜೊತೆಯಾಗಿರಲು ನಮ್ಮ ಪ್ರಯತ್ನ ಮಾಡಿದ್ದೆವು. ಜೊತೆಯಾಗಿದ್ದಾಗ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ”, ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News