ನಾಯಕಿಯಾಗಿ ಅತ್ಯಂತ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಹರ್ಮನ್‌ಪ್ರೀತ್
Update: 2025-12-27 21:58 IST
ಹರ್ಮನ್‌ಪ್ರೀತ್ | Photo Credit : PTI
ಮುಂಬೈ, ಡಿ. 27: ತಿರುವನಂತಪುರದಲ್ಲಿ ಶುಕ್ರವಾರ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯವನ್ನು ಭಾರತೀಯ ಮಹಿಳೆಯರು ಭರ್ಜರಿ ಎಂಟು ವಿಕೆಟ್‌ಗಳಿಂದ ಗೆದ್ದಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡವು 40 ಎಸೆತಗಳು ಬಾಕಿಯಿರುವಂತೆಯೇ ಗೆಲುವು ದಾಖಲಿಸಿ ಸರಣಿಯನ್ನು ಗೆದ್ದಿದೆ.
ಇದು ನಾಯಕಿಯಾಗಿ ಹರ್ಮನ್‌ಪ್ರೀತ್ ರ 77ನೇ ಅಂತರ್‌ರಾಷ್ಟ್ರೀಯ ಟಿ20 ವಿಜಯವಾಗಿದೆ. ಇದರೊಂದಿಗೆ ಟಿ20 ಮಾದರಿಯಲ್ಲಿ ನಾಯಕಿಯಾಗಿ ಅತಿ ಹೆಚ್ಚಿನ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ. ಈ ಮೂಲಕ ಅವರು ಮೆಗ್ ಲ್ಯಾನಿಂಗ್‌ರ ದಾಖಲೆಯನ್ನು ಮುರಿದಿದ್ದಾರೆ.
ಹರ್ಮನ್‌ಪ್ರೀತ್ 130 ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಇದು ಕೂಡ ವಿಶ್ವ ದಾಖಲೆಯಾಗಿದೆ.