×
Ad

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ | ಸಾಲ್ಟ್-ಬಟ್ಲರ್ ಆರ್ಭಟಕ್ಕೆ ನಲುಗಿದ ಹರಿಣಗಳು: 20 ಓವರ್ ಗಳಲ್ಲಿ 304 ರನ್ ಪೇರಿಸಿದ ಆಂಗ್ಲರು

Update: 2025-09-13 15:27 IST

Photo credit: X/@englandcricket

ಮ್ಯಾಂಚೆಸ್ಟರ್: ಫಿಲ್ ಸಾಲ್ಟ್ ಅಬ್ಬರದ ಶತಕ ಹಾಗೂ ಜೋಸ್ ಬಟ್ಲರ್ ರ ಬಿರುಸಿನ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಎರಡನೆ ಟಿ20 ಪಂದ್ಯದಲ್ಲಿ 146 ರನ್ ಗಳ ಬೃಹತ್ ಗೆಲುವು ಸಾಧಿಸಿದೆ.

ಇದಕ್ಕೂ ಮುನ್ನ, ಫಿಲ್ ಸಾಲ್ಟ್ (ಅಜೇಯ 141) ಹಾಗೂ ಜೋಸ್ ಬಟ್ಲರ್ (83) ರನ್ ಗಳ ನೆರವಿನಿಂದ ಪುರುಷರ ಟಿ-20 ಪಂದ್ಯದಲ್ಲಿ ಇದುವರೆಗಿನ ಭಾರತದ ದಾಖಲೆಯಾಗಿದ್ದ 297/6 ಅನ್ನು ಮುರಿದ ಇಂಗ್ಲೆಂಡ್ ತಂಡ, ಕೇವಲ ಎರಡು ವಿಕೆಟ್ ನಷ್ಟಕ್ಕೆ 304 ರನ್ ಪೇರಿಸಿತು.

ಈ ಬೃಹತ್ ಮೊತ್ತದ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, 16.1 ಓವರ್ ಗಳಲ್ಲಿ ಕೇವಲ 158 ರನ್ ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ತಂಡದ ಪರ ನಾಯಕ ಮರ್ಕ್ರಮ್ (41) ಹಾಗೂ ಫಾರ್ಚೂನ್ (33) ಮಾತ್ರ ಉತ್ತಮ ರನ್ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News