×
Ad

ಖ್ಯಾತ ಹಾಕಿ ಕೋಚ್ ಪ್ರತಿಮಾ ಬರ್ವ ನಿಧನ

Update: 2025-06-02 21:51 IST

ರಾಂಚಿ: ಸಲೀಮಾ ಟೇಟೆ, ಸಂಗೀತಾ ಕುಮಾರಿ ಮತ್ತು ಬ್ಯುಟಿ ಡಂಗ್‌ಡಂಗ್ ಮುಂತಾದ ಅಂತರ್‌ರಾಷ್ಟ್ರೀಯ ಹಾಕಿಪಟುಗಳನ್ನು ರೂಪಿಸಿದ ಹಾಕಿ ಕೋಚ್ ಪ್ರತಿಮಾ ಬರ್ವ ಶನಿವಾರ ರಾಂಚಿಯಲ್ಲಿ ನಿಧನರಾದರು.

ಅವರು ಆಸ್ಪತ್ರೆಯಲ್ಲಿ ಪಕ್ಷವಾತಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಆಸ್ಪತ್ರೆಯಲ್ಲೇ ಮೆದುಳಿನ ರಕ್ತಸ್ರಾವದಿಂದಾಗಿ ಮೃತಪಟ್ಟರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಅವರು ಪತಿ ಮತ್ತು ಮಗನನ್ನು ಅಗಲಿದ್ದಾರೆ.

1995ರಲ್ಲಿ ಮಂಡಿ ಗಾಯಕ್ಕೆ ಒಳಗಾದ ಬಳಿಕ ಭಾರತೀಯ ಹಾಕಿ ತಂಡದಲ್ಲಿ ಆಡಬೇಕೆಂಬ ಅವರ ಕನಸು ನುಚ್ಚುನೂರಾಯಿತು. ಬಳಿಕ ಅವರು ಕೋಚ್ ಆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News