×
Ad

ಹಾಕಿ ಇಂಡಿಯಾ ಲೀಗ್ ಹರಾಜು ಹರ್ಮನ್‌ಪ್ರೀತ್ ಸಿಂಗ್ ದುಬಾರಿ ಆಟಗಾರ

Update: 2024-10-14 21:23 IST

ಹರ್ಮನ್‌ಪ್ರೀತ್ ಸಿಂಗ್ | PC : PTI 

ಹೊಸದಿಲ್ಲಿ : ಹಾಕಿ ಇಂಡಿಯ ಲೀಗ್‌ಗಾಗಿ(ಎಚ್‌ಐಎಲ್)ಆಟಗಾರರ ಹರಾಜು ಪ್ರಕ್ರಿಯೆ ದಿಲ್ಲಿಯಲ್ಲಿ ಅ.13 ರಂದು ಆರಂಭವಾಗಿದ್ದು, 15ರ ತನಕ ನಡೆಯಲಿದೆ. ಅಂತರ್‌ರಾಷ್ಟ್ರೀಯ ಹಾಗೂ ದೇಶೀಯ ಪ್ರತಿಭೆಗಳು ಸೇರಿದಂತೆ 1,000ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿ ಭಾಗವಹಿಸಿದ್ದಾರೆ.

ಭಾರತದ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಸೂರ್ಮ ಹಾಕಿ ಕ್ಲಬ್(ಪಂಜಾಬ್ ಫ್ರಾಂಚೈಸಿ)78 ಲಕ್ಷ ರೂ. ನೀಡಿ ಹರ್ಮನ್‌ಪ್ರೀತ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಭಾರತದ ಫಾರ್ವರ್ಡ್ ಆಟಗಾರ ಅಭಿಷೇಕ್ ಎರಡನೇ ದುಬಾರಿ ಆಟಗಾರ ಎನಿಸಿಕೊಂಡರು. ಅಭಿಷೇಕ್‌ರನ್ನು ಶರಚಿ ಬಂಗಾಳ್ ಟೈಗರ್ಸ್ 72 ಲಕ್ಷ ರೂ.ನೀಡಿ ಖರೀದಿಸಿದೆ.

ಆಟಗಾರರಿಗೆ 2 ಲಕ್ಷ ರೂ., 5 ಲಕ್ಷ ರೂ. ಹಾಗೂ 10 ಲಕ್ಷ ರೂ. ಮೂರು ಮೂಲ ಬೆಲೆ ನಿಗದಿಪಡಿಸಲಾಗಿದೆ.

600ಕ್ಕೂ ಅಧಿಕ ಆಟಗಾರರು 2 ಲಕ್ಷ ರೂ. ವಿಭಾಗ, 250ಕ್ಕೂ ಅಧಿಕ ಆಟಗಾರರು 5 ಲಕ್ಷ ರೂ. ವಿಭಾಗ ಹಾಗೂ 250ಕ್ಕೂ ಅಧಿಕ ಆಟಗಾರರು 10 ಲಕ್ಷ ರೂ. ವಿಭಾಗದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News