ಪುರುಷರ ಜೂನಿಯರ್ ವಿಶ್ವಕಪ್ ಗೆ ಉಚಿತ ಟಿಕೆಟ್ ಪ್ರಕಟಿಸಿದ ಹಾಕಿ ಇಂಡಿಯಾ
Update: 2025-11-23 22:08 IST
PC : ANI
ಮಧುರೈ, ನ.23: ಚೆನ್ನೈನಲ್ಲಿ ನವೆಂಬರ್ 28ರಿಂದ ಡಿಸೆಂಬರ್ 10ರ ತನಕ ನಡೆಯಲಿರುವ ಪುರುಷರ ಜೂನಿಯರ್ ವಿಶ್ವಕಪ್ ಟೂರ್ನಿಯನ್ನು ವೀಕ್ಷಿಸಲು ಅಭಿಮಾನಿಗಳಿಗೆ ಹಾಕಿ ಇಂಡಿಯಾವು ರವಿವಾರ ಉಚಿತ ಟಿಕೆಟ್ ಗಳನ್ನು ಘೋಷಿಸಿದೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿದ್ದು, ಜೂನಿಯರ್ ವಿಶ್ವಕಪ್ ಇತಿಹಾಸದಲ್ಲಿ ಇದು ದೊಡ್ಡ ಟೂರ್ನಿಯಾಗಿದೆ.
‘‘ಉಚಿತ ಟಿಕೆಟ್ ಗಳನ್ನು ನೀಡುವ ಮೂಲಕ ತಮಿಳುನಾಡು ಹಾಗೂ ಅದರಾಚೆಗಿನ ವಿದ್ಯಾರ್ಥಿಗಳು, ಯುವ ಕ್ರೀಡಾಪಟುಗಳು, ಕುಟುಂಬಗಳು ಹಾಗೂ ಹಾಕಿ ಪ್ರಿಯರಿಗೆ ಬಾಗಿಲು ತೆರೆಯುವುದು ನಮ್ಮ ಗುರಿಯಾಗಿದೆ’’ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.