ಹಾಕಿ ಸೀನಿಯರ್ ಪುರುಷರ ರಾಷ್ಟ್ರೀಯ ಕೋಚಿಂಗ್ ಶಿಬಿರ | 33 ಆಟಗಾರರ ತಂಡ ಘೋಷಣೆ
PC : thehindu.com
ಹೊಸದಿಲ್ಲಿ: ಹಾಕಿ ಇಂಡಿಯಾ ಗುರುವಾರ ಹಿರಿಯ ಪುರುಷರ ರಾಷ್ಟ್ರೀಯ ಕೋಚಿಂಗ್ ಶಿಬಿರಕ್ಕೆ 33 ಆಟಗಾರರನ್ನು ಹೆಸರಿಸಿದೆ. ಶಿಬಿರವು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಜುಲೈ 14ರಿಂದ ಆಗಸ್ಟ್ 7ರವರೆಗೆ ನಡೆಯಲಿದೆ.
2 ಪ್ರಮುಖ ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ಆಟಗಾರರನ್ನು ಸಿದ್ಧಗೊಳಿಸುವುದಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಅವುಗಳೆಂದರೆ- ಆಸ್ಟ್ರೇಲಿಯ ಪ್ರವಾಸ ಮತ್ತು ಆಗಸ್ಟ್ 29ರಿಂದ ಸೆಪ್ಟಂಬರ್ 7ರವರೆಗೆ ನಡೆಯಲಿರುವ ಏಶ್ಯ ಕಪ್ 2025 ಪಂದ್ಯಾವಳಿ. ಏಶ್ಯ ಕಪ್ ವಿಜೇತ ತಂಡವು ಎಫ್ ಐ ಎಚ್ ಹಾಕಿ ಪುರುಷರ ವಿಶ್ವಕಪ್ 2026ಕ್ಕೆ ನೇರ ಪ್ರವೇಶ ಪಡೆಯುತ್ತದೆ.
ಯುರೋಪ್ ನಲ್ಲಿ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2024-25 ಪಂದ್ಯಾವಳಿಯಲ್ಲಿ ಭಾರತದ ಪ್ರದರ್ಶನ ನಿರಾಶಾದಾಯಕವಾಗಿತ್ತು. ಅದು 8 ಪಂದ್ಯಗಳಿಂದ ಕೇವಲ 1 ವಿಜಯವನ್ನು ಗಳಿಸಿದೆ ಮತ್ತು ಲೀಗ್‌ನಲ್ಲಿ 8ನೇ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ, ತಂಡಕ್ಕೆ ಪುನಶ್ಚೇತನವನ್ನು ತುಂಬಿಸುವ ಮತ್ತು ಮುಂಬರುವ ಪಂದ್ಯಾವಳಿಗಳಿಗೆ ಪೂರ್ವಭಾವಿಯಾಗಿ ಕ್ರೀಡೆಯ ಪ್ರಮುಖ ಕ್ಷೇತ್ರಗಳಲ್ಲಿನ ಹಿನ್ನಡೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಶಿಬಿರ ಕೆಲಸ ಮಾಡಲಿದೆ.
ಗೋಲ್ ಕೀಪಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.
►ಗೋಲ್ ಕೀಪರ್ ಗಳು: ಕೃಶನ್ ಬಿ. ಪಾಠಕ್, ಸೂರಜ್ ಕರ್ಕೇರ, ಪವನ್, ಮೋಹಿತ್ ಎಚ್.ಎಸ್.
ಡಿಫೆಂಡರ್ ಗಳು: ಸುಮಿತ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ನೀಲಮ್ ಸಂಜೀಪ್ ಝೆಸ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್ ಪ್ರೀತ್ ಸಿಂಗ್, ಸಂಜಯ್, ಯಶ್‌ದೀಪ್ ಸಿವಾಚ್, ಅಮನ್‌ದೀಪ್ ಲಾಕ್ರ.
ಮಿಡ್ ಫೀಲ್ಡರ್ ಗಳು: ರಾಜ್ ಕುಮಾರ್ ಪಾಲ್, ನೀಲಕಂಠ ಶರ್ಮ, ಹಾರ್ದಿಕ್ ಸಿಂಗ್, ರಾಜಿಂದರ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಮೊಯಿರಾಂಗ್ತೆಮ್ ರಬಿಚಂದ್ರ ಸಿಂಗ್, ಪೂವಣ್ಣ ಸಿ.ಬಿ., ವಿಷ್ಣುಕಾಂತ ಸಿಂಗ್.
ಫಾರ್ವಡ್ ಗಳು: ಗುರ್ಜಂತ್ ಸಿಂಗ್, ಅಭಿಷೇಕ್, ಶಿಲಾನಂದ ಲಾಕ್ರ, ಮನ್‌ದೀಪ್ ಸಿಂಗ್, ದಿಲ್ ಪ್ರೀತ್ ಸಿಂಗ್, ಸುಖ್‌ಜೀತ್ ಸಿಂಗ್, ಆದಿತ್ಯ ಅರ್ಜುನ್ ಲಗಾಗೆ, ಸೆಲ್ವಮ್ ಕಾರ್ತಿ, ಉತ್ತಮ್ ಸಿಂಗ್, ಅಂಗದ್ ಬೀರ್ ಸಿಂಗ್.