ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ಪಡೆದ ನಗದು ಬಹುಮಾನವೆಷ್ಟು?
Photo credit: PTI
ಹೊಸದಿಲ್ಲಿ: ಅಹಮದಾಬಾದ್‌ನಲ್ಲಿ ನಡೆದ 2025ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ 18 ವರ್ಷಗಳ ಬಳಿಕ ಟ್ರೋಫಿಯನ್ನು ಗೆದ್ದುಕೊಂಡು ಆರ್‌ಸಿಬಿ ಇತಿಹಾಸವನ್ನು ನಿರ್ಮಿಸಿದೆ.
ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಐಪಿಎಲ್ ಬಹುಮಾನದ ಮೊತ್ತವಾಗಿ 20 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ರನ್ನರ್ ಅಪ್ ಆಗಿರುವ ಪಂಜಾಬ್ ಕಿಂಗ್ಸ್ ತಂಡ 12.5 ಕೋಟಿ ರೂ.ಬಹುಮಾನದ ಮೊತ್ತವನ್ನು ಪಡೆದುಕೊಂಡಿದೆ.
ವರ್ಷಗಳು ಕಳೆದಂತೆ ಐಪಿಎಲ್ ಬಹುಮಾನದ ಮೊತ್ತ ಹೆಚ್ಚಾಗುತ್ತಿದೆ. 2008ರ ಉದ್ಘಾಟನಾ ಆವೃತ್ತಿಯಲ್ಲಿ ವಿಜೇತ ತಂಡವು 4.8 ಕೋಟಿ ರೂ. ಬಹುಮಾನದ ಮೊತ್ತವನ್ನು ಪಡೆದರೆ, ರನ್ನರ್ ಅಪ್ ತಂಡವು 2.4 ಕೋಟಿ ರೂ.ಪಡೆದಿತ್ತು. ಈ ಮೊತ್ತವು ಕ್ರಿಕೆಟ್ ಪಂದ್ಯಾವಳಿಗೆ ಪಡೆಯುವ ಅತ್ಯಧಿಕ ಬಹುಮಾನದ ಮೊತ್ತವಾಗಿತ್ತು. ಹಲವಾರು ಉನ್ನತ ಕಾರ್ಪೊರೇಟ್ ಸಂಸ್ಥೆಗಳು ಐಪಿಎಲ್ ಲೀಗ್ ಅನ್ನು ಬೆಂಬಲಿಸುವುದರೊಂದಿಗೆ ಐಪಿಎಲ್ ಅಂತಿಮವಾಗಿ ಗೇಮ್-ಚೇಂಜರ್ ಆಗಿ ಮಾರ್ಪಟ್ಟಿತು.
ಅತಿ ಹೆಚ್ಚು ರನ್‌ಗಳಿಸುವ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ಮತ್ತು 10 ಲಕ್ಷ ರೂ. ನಗದು ಬಹುಮಾನ ಮತ್ತು ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್‌ಗೆ ಪರ್ಪಲ್ ಕ್ಯಾಪ್ ಮತ್ತು 10 ಲಕ್ಷ ರೂ. ಬಹುಮಾನ ನೀಡಲಾಗಿದೆ.