×
Ad

ಏಕದಿನ ಕ್ರಿಕೆಟ್‌ನಿಂದ ನಾನು ನಿವೃತ್ತಿ ಹೊಂದುತ್ತಿಲ್ಲ: ರೋಹಿತ್ ಶರ್ಮಾ

Update: 2025-03-09 23:53 IST

PC | @ICC

ದುಬೈ : ಏಕದಿನ ಕ್ರಿಕೆಟ್‌ನಿಂದ ನಾನು ನಿವೃತ್ತಿ ಹೊಂದುತ್ತಿಲ್ಲ. ಭಾರತಕ್ಕಾಗಿ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸುತ್ತೇನೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಸ್ಮರಣೀಯ ವಿಜಯದತ್ತ ಕೊಂಡೊಯ್ದ ನಂತರ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿವೃತ್ತಿಯ ಕುರಿತು ಏನೂ ಮಾತನಾಡದ ಅವರು, ಮುಗಿಸುವ ಹಂತದಲ್ಲಿ 'ನಿವೃತ್ತಿ'ಯ ಊಹಾಪೋಹಗಳನ್ನು ಒಮ್ಮೆಗೇ ಕೊನೆಗೊಳಿಸಿದರು. "ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಹೊಂದುತ್ತಿಲ್ಲ. ಈ ಬಗ್ಗೆ ಸುಮ್ಮನೆ ವದಂತಿ ಹರಡಬೇಡಿ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News