×
Ad

5ನೇ ಟೆಸ್ಟ್: 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್

Update: 2024-03-07 13:43 IST
Photo: BCCI

ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದಿರುವ ಇಂಗ್ಲೆಂಡ್ ತಂಡವು, ಇತ್ತೀಚಿನ ವರದಿಗಳ ಪ್ರಕಾರ, 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ.

ಇದಕ್ಕೂ ಮುನ್ನ, ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡಕ್ಕೆ ಕ್ರಾಲೆ (79) ಹಾಗೂ ಡಕೆಟ್ ((27) ರನ್‌ಗಳ ಉತ್ತಮ ಆರಂಭ ಒದಗಿಸಿದರು. ಆದರೆ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದರು. ಅವರು 5 ವಿಕೆಟ್‌ ಪಡೆದು ಮಿಂಚಿದರು. ರವಿಚಂದ್ರನ್‌ ಆಶ್ವಿನ್‌ 1 ವಿಕೆಟ್‌ ಪಡೆದರು.

ಇಂಗ್ಲೆಂಡ್ ತಂಡದ ಮೊತ್ತ 64 ರನ್ ಆಗಿದ್ದಾಗ ಡಕೆಟ್ ಅನ್ನು ಔಟ್ ಮಾಡಿದ ಕುಲದೀಪ್ ಯಾದವ್, ಅದರ ಬೆನ್ನಿಗೇ ಪೋಪ್ ವಿಕೆಟ್ ಅನ್ನು ಕಿತ್ತರು. ಕೇವಲ 11 ರನ್ ಗಳಿಸಿದ್ದ ಪೋಪ್, ವಿಕೆಟ್ ಕೀಪರ್ ಧ್ರುವ್ ಜುರೇಲ್ ಮಾಡಿದ ಸ್ಟಂಪ್‌ಗೆ ಬಲಿಯಾದರು.

ಇಂಗ್ಲೆಂಡ್ ತಂಡದ ಮೊತ್ತ 137 ರನ್ ಆಗಿದ್ದಾಗ ಮತ್ತೊಂದು ಆಘಾತ ನೀಡಿದ ಕುಲದೀಪ್ ಯಾದವ್, ಅರ್ಧ ಶತಕ ಗಳಿಸಿ ಉತ್ತಮ ಲಯದಲ್ಲಿದ್ದ ಕ್ರಾಲೆಯನ್ನು ಬೌಲ್ಡ್ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News