ಏಶ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಭಾರತದ ಪದಕ ಬೇಟೆ; ಕಬಡ್ಡಿಯಲ್ಲಿ ಮತ್ತೊಂದು ಚಿನ್ನ
Update: 2023-10-07 15:47 IST
Photo:X/@Media_SAI
ಹ್ಯಾಂಗ್ ಝೌ: ಭಾರತೀಯ ಪುರುಷರ ಕಬಡ್ಡಿ ತಂಡವು ಹಾಲಿ ಚಾಂಪಿಯನ್ ಇರಾನ್ ತಂಡವನ್ನು 33-29 ಅಂತರದಲ್ಲಿ ಮಣಿಸುವ ಮೂಲಕ ಕಬಡ್ಡಿ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.
ಇದಕ್ಕೂ ಮುನ್ನ, ಮಹಿಳಾ ಕಬಡ್ಡಿ ತಂಡ ಕೂಡಾ ಚಿನ್ನದ ಪದಕವನ್ನು ಜಯಿಸಿತ್ತು. ಚೀನಾ ತೈಪೆಯನ್ನು ಫೈನಲ್ ಪಂದ್ಯದಲ್ಲಿ ಪರಾಭವಗೊಳಿಸಿದ ಭಾರತೀಯ ಮಹಿಳಾ ಕಬಡ್ಡಿ ತಂಡವು, ಭಾರತದ ಪದಕ ಪಟ್ಟಿಗೆ ಮತ್ತೊಂದು ಚಿನ್ನದ ಪದಕವನ್ನು ಸೇರ್ಪಡೆ ಮಾಡಿತು.
ಈವರೆಗೆ ಭಾರತವು 28 ಚಿನ್ನದ ಪದಕಗಳನ್ನು ಜಯಿಸಿದೆ.