ಏಶ್ಯನ್ ಗೇಮ್ಸ್: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ
Update: 2023-09-26 16:40 IST
Photo: Screengrab/X
ಬೀಜಿಂಗ್/ಹೊಸದಿಲ್ಲಿ: ಚೀನಾದ ಹ್ಯಾಂಗ್ ಝೂನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 41 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ತಂಡ ಕುದುರೆ ಸವಾರಿ (ಡೆಸ್ಸೇಜ್ ಟೀಮ್ ಇವೆಂಟ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಅನುಷ್ ಅಗರ್‌ವಾಲಾ, ಹೃದಯ್ ವಿಪುಲ್ ಛೇಡಾ, ದಿವ್ಯಾಕೃತಿ ಸಿಂಗ್, ಸುದೀಪ್ತಿ ಹಜೇಲಾ ಅವರನ್ನೊಳಗಂಡ ತಂಡವು ಭಾರತವನ್ನು ಪ್ರತಿನಿಧಿಸಿದ್ದು, ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.