×
Ad

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ| ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಆ್ಯನ್ ಸೆ-ಯಂಗ್

Update: 2026-01-18 20:06 IST

Photo: @Xpress_Sports

ಹೊಸದಿಲ್ಲಿ, ಜ.18: ಎರಡು ಬಾರಿಯ ಏಶ್ಯನ್ ಚಾಂಪಿಯನ್ ಹಾಗೂ ತನ್ನ ಬದ್ಧ ಎದುರಾಳಿ ವಾಂಗ್ ಝಿಯಿ ಅವರನ್ನು ಮಣಿಸಿದ ಆ್ಯನ್ ಸೇ-ಯಂಗ್ 2026ರ ಆವೃತ್ತಿಯ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಕೇವಲ ವಾರದ ಹಿಂದೆ ಝಿಹಿ ಅವರನ್ನು ಮಣಿಸಿ ಮಲೇಶ್ಯ ಓಪನ್ ಜಯಿಸಿದ್ದ ಸೆ-ಯಂಗ್ ರವಿವಾರ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ 43 ನಿಮಿಷಗಳಲ್ಲಿ ಕೊನೆಗೊಂಡಿರುವ ಪಂದ್ಯದಲ್ಲಿ ಜಯ ಸಾಧಿಸಿ ಇಂಡಿಯಾ ಓಪನ್ ಫೈನಲ್‌ನಲ್ಲಿ 2-0 ಮುನ್ನಡೆ ಕಾಯ್ದುಕೊಂಡರು.

ಸೆ-ಯಂಗ್ ಮೊದಲ ಗೇಮ್ ಅನ್ನು 21-13 ಹಾಗೂ ಎರಡನೇ ಗೇಮ್ ಅನ್ನು 21-11 ಅಂತರದಿಂದ ಗೆದ್ದುಕೊಂಡರು.

2025ರಲ್ಲಿ 11 ಪ್ರಶಸ್ತಿಗಳನ್ನು ಜಯಿಸಿದ್ದ ದಕ್ಷಿಣ ಕೊರಿಯಾದ ಸ್ಟಾರ್ ಸೆ-ಯಂಗ್, ಇಂಡಿಯಾ ಓಪನ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಟ್ರೋಫಿಯನ್ನು ಜಯಿಸಿದರು. ಈ ವರ್ಷ ಮಲೇಶ್ಯ ಓಪನ್ ಪ್ರಶಸ್ತಿಯನ್ನು ಗೆದ್ದಿರುವ ಸೆ-ಯಂಗ್ ಇದೀಗ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸೆ-ಯಂಗ್ ಅವರು ಚೀನಾದ ಝಿಹಿ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 18ರಲ್ಲಿ ಗೆಲುವು ಹಾಗೂ ನಾಲ್ಕರಲ್ಲಿ ಸೋಲನುಭವಿಸಿದ್ದಾರೆ. ಹಿಂದಿನ 10 ಪಂದ್ಯಗಳಲ್ಲಿ ಝಿಹಿ ವಿರುದ್ಧ ಸೆ-ಯಂಗ್ ಸೋತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News