×
Ad

ಎಫ್‌ಐಎಚ್ ಹಾಕಿ ಪ್ರೊ ಲೀಗ್‌ | ಭಾರತ-ಪಾಕ್ ಮುಖಾಮುಖಿ

Update: 2025-08-28 20:32 IST

PC:  @indianhockey 

ಹೊಸದಿಲ್ಲಿ, ಆ. 28: ಎಫ್‌ಐಎಚ್ ಹಾಕಿ ಪ್ರೊ ಲೀಗ್ 2025-26 ಋತುವಿನಲ್ಲಿ, ನ್ಯೂಝಿಲ್ಯಾಂಡ್ ನ ಸ್ಥಾನದಲ್ಲಿ ಆಡುವಂತೆ ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ನೀಡಿರುವ ಆಹ್ವಾನವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಹಾಗಾಗಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಲಿವೆ.

ಈ ವರ್ಷದ ಆರಂಭದಲ್ಲಿ ಮಲೇಶ್ಯದಲ್ಲಿ ನಡೆದ ಎಫ್‌ಐಎಚ್ ನೇಶನ್ಸ್ ಕಪ್‌ ನ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ಪಾಕಿಸ್ತಾನವನ್ನು ಸೋಲಿಸಿತ್ತು. ಹಾಗಾಗಿ, ಅದರ ಆಧಾರದಲ್ಲಿ 2025-26 ಋತುವಿನ ಪ್ರೊ ಲೀಗ್‌ನಲ್ಲಿ ಆಡುವ ಅರ್ಹತೆಯನ್ನು ಅದು ಪಡೆದಿತ್ತು. ಆದರೆ, ಈ ಪಂದ್ಯಾವಳಿಯಲ್ಲಿ ಆಡುವಂತೆ ಬಂದಿರುವ ಆಹ್ವಾನವನ್ನು ಸ್ವೀಕರಿಸದಿರಲು ಈಗ ಹಾಕಿ ನ್ಯೂಝಿಲ್ಯಾಂಡ್ ನಿರ್ಧರಿಸಿದೆ.

ಹಾಗಾಗಿ, ನಿಯಮಾವಳಿಗಳಪ್ರಕಾರ, ರನ್ನರ್ಸ್-ಅಪ್ ಪಾಕಿಸ್ತಾನಕ್ಕೆ ಎಫ್‌ಐಎಚ್ ಆಹ್ವಾನಿ ನೀಡಿದೆ ಮತ್ತು ಅದನ್ನು ಪಾಕಿಸ್ತಾನ ಸ್ವೀಕರಿಸಿದೆ.

ಮುಂಬರುವ ಪುರುಷರ ಏಳನೇ ಆವೃತ್ತಿಯ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ ನಲ್ಲಿ ಅರ್ಜೆಂಟೀನ, ಆಸ್ಟ್ರೇಲಿಯ, ಬೆಲ್ಜಿಯಮ್, ಇಂಗ್ಲೆಂಡ್, ಜರ್ಮನಿ, ಭಾರತ, ನೆದರ್‌ಲ್ಯಾಂಡ್ಸ್, ಸ್ಪೇನ್ ಮತ್ತು ಪಾಕಿಸ್ತಾನ ತಂಡಗಳು ಪಾಲ್ಗೊಳ್ಳಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News