×
Ad

ಮತ್ತೊಮ್ಮೆ ಹಸ್ತಲಾಘವ ಮಾಡದ ಸೂರ್ಯಕುಮಾರ್-ಸಲ್ಮಾನ್ ಅಲಿ

Update: 2025-09-21 22:42 IST

Photo Credit: AP Photo/Altaf Qadri

ದುಬೈ, ಸೆ.21: ಏಶ್ಯ ಕಪ್‌ನ ಸೂಪರ್-4 ಪಂದ್ಯದಲ್ಲಿ ರವಿವಾರ ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅವರು ಮತ್ತೊಮ್ಮೆ ಪರಸ್ಪರ ಕೈ ಕುಲುಕಲಿಲ್ಲ.

ಗ್ರೂಪ್ ಹಂತದಲ್ಲಿ ಕೂಡ ಸೂರ್ಯಕುಮಾರ್ ಅವರು ಅಲಿ ಅವರ ಕೈಕುಲುಕದೇ ಇರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಸೂರ್ಯಕುಮಾರ್ ಅವರು ಇಂದು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರ ಕೈಕುಲುಕಿದರು. ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅವರ ಕೈ ಕುಲುಕದೆ ಮುಂದೆ ಸಾಗಿದರು. ಅಲಿ ಅವರು ಪೈಕ್ರಾಫ್ಟ್ ಕೈಕುಲುಕಲಿಲ್ಲ.

ಭಾರತ ತಂಡವು ಆಡುವ 11ರ ಬಳಗದಲ್ಲಿ 2 ಬದಲಾವಣೆ ಮಾಡಿದ್ದು, ಅರ್ಷದೀಪ್ ಹಾಗೂ ಹರ್ಷಿತ್ ಬದಲಿಗೆ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ವಾಪಸಾಗಿದ್ದಾರೆ. ಪಾಕ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಹಸನ್ ನವಾಝ್ ಹಾಗೂ ಖುಷ್ದಿಲ್ ಶಾ ಬದಲಿಗೆ ಹುಸೇನ್ ತಲತ್ ಹಾಗೂ ಫಹೀಂ ಅಶ್ರಫ್ ಅವಕಾಶ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News